ಕಾಡಾನೆ ದಾಳಿ: ಮಹಿಳೆ ಸಾವು; ಓರ್ವ ಗಂಭೀರ

saroja
27/03/2022

ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಅಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಕೆಳಗೂರು ಗ್ರಾಮದಲ್ಲಿ ನಡೆದಿದೆ.

ಮೂಲತಃ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಬ್ಯಾಡಗಿ ಮೂಲದ ಸರೋಜಬಾಯಿ (45) ಮೃತ ಮಹಿಳೆ. ಈ ಘಟನೆಯಲ್ಲಿ ಮತ್ತೊರ್ವ ಕಾರ್ಮಿಕ ದುಗ್ಗಪ್ಪ ಎಂಬವರು ಗಂಭೀರ ಗಾಯಗೊಂಡಿದ್ದಾರೆ.

ಸರೋಜಬಾಯಿ ಕುಟುಂಬ ಚಿಕ್ಕಮಗಳೂರಿನಲ್ಲಿ ನೆಲೆಸಿದ್ದು, ಕಾಫಿತೋಟದಲ್ಲಿ ಕಾರ್ಮಿಕರಾಗಿದ್ದರು. ಎಂದಿನಂತೆ ಶನಿವಾರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ಮಹಿಳೆಯನ್ನು ಎತ್ತಿ ಬಿಸಾಡಿದೆ. ನೆಲಕ್ಕೆ ಬಿದ್ದ ಮಹಿಳೆಗೆ ಗಂಭೀರ ಗಾಯಗಳಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟದ್ದಾರೆ.

ಈ ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್‌ಗೆ ಜಾಮೀನು

ಬಿರ್ಭೂಮ್ ಹಿಂಸಾಚಾರ: ಘಟನಾ ಸ್ಥಳದಲ್ಲಿ ಮತ್ತೆ 40 ಕಚ್ಚಾ ಬಾಂಬ್‌ಗಳು ಪತ್ತೆ

ಸಿದ್ದರಾಮಯ್ಯ ಕನ್ವರ್ಟ್ ಕಾಂಗ್ರೆಸ್: ಸಚಿವ ಬಿ.ಸಿ ನಾಗೇಶ್

ದಿ ಕಾಶ್ಮೀರ್ ಫೈಲ್ ಸಿನಿಮಾ ನಿರ್ದೇಶಕನ ವಿರುದ್ಧ ದೂರು ದಾಖಲು

ಇತ್ತೀಚಿನ ಸುದ್ದಿ

Exit mobile version