ಬೀಟಮ್ಮ ಗ್ಯಾಂಗ್ ನಲ್ಲಿ ಮಡುಗಟ್ಟಿದ ಶೋಕ: ವಿದ್ಯುತ್ ಶಾಕ್ ಗೆ ಬಲಿಯಾದ ಕಾಡಾನೆ
ಚಿಕ್ಕಮಗಳೂರು: ಕಾಫಿನಾಡಿನ ಕಾಡಾನೆಗಳ ಹಿಂಡು ಬೀಟಮ್ಮ ಗ್ಯಾಂಗ್ ನಲ್ಲಿಂದು ಶೋಕ ಮಡುಗಟ್ಟಿದೆ. ಆಹಾರ ಅರಸಿ ಸಾಗಿದ್ದ 17 ಕಾಡಾನೆಗಳ ಹಿಂಡು ಬೀಟಮ್ಮನ ಗ್ಯಾಂಗ್ ನ ಒಂದು ಆನೆ ವಿದ್ಯುತ್ ಶಾಕ್ ಗೆ ಒಳಗಾಗಿ ದಾರುಣವಾಗಿ ಸಾವನ್ನಪ್ಪಿದೆ.
ಚಿಕ್ಕಮಗಳೂರು ತಾಲೂಕಿನ ತುಡುಕೂರು ಬಳಿ ಈ ಘಟನೆ ನಡೆದಿದೆ. ಕಾಫಿ ತೋಟದಲ್ಲಿ ಬೀಟಮ್ಮನ ಗ್ಯಾಂಗ್ ಗೆ ಸೇರಿದ ಕಾಡಾನೆಯೊಂದು ವಿದ್ಯುತ್ ಶಾಕ್ ಗೆ ಬಲಿಯಾಗಿದೆ.
ಕಳೆದ 3 ದಿನಗಳಿಂದ 17 ಕಾಡಾನೆಗಳ ಹಿಂಡು ಬೀಟಮ್ಮನ ಗ್ಯಾಂಗ್ ತುಡೂರು ಸುತ್ತಮುತ್ತ ತಿರುಗುತ್ತಿತ್ತು. 3 ದಿನಗಳಿಂದ ಸಾಕಷ್ಟು ತೋಟಗಳನ್ನು ಬೀಟಮ್ಮ ಗ್ಯಾಂಗ್ ನಾಶ ಮಾಡಿತ್ತು. ಇದೀಗ 17 ಕಾಡಾನೆಗಳ ಹಿಂಡಿನಲ್ಲಿ 1 ಕಾಡಾನೆ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿದೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇತ್ತೀಚೆಗೆ ವಿದ್ಯುತ್ ತಂತಿ ಬೇಲಿಗಳಿಂದಾಗಿ ಕಾಡಾನೆಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: