ಕಡತ ದುರುಪಯೋಗ ಪ್ರಕರಣ: ಗ್ರಾಮಕರಣಿಕ ಜಯಚಂದ್ರ ಬಂಧನ - Mahanayaka
11:12 AM Wednesday 12 - March 2025

ಕಡತ ದುರುಪಯೋಗ ಪ್ರಕರಣ: ಗ್ರಾಮಕರಣಿಕ ಜಯಚಂದ್ರ ಬಂಧನ

jayachandra
07/09/2022

ಬೆಳ್ತಂಗಡಿ: ಕಂದಾಯ ಇಲಾಖೆಯ ದಾಖಲೆ ದುರುಪಯೋಗ ಪ್ರಕರಣದ ಆರೋಪದಲ್ಲಿ  ಗ್ರಾಮ ಕರಣಿಕರೋರ್ವರನ್ನು ಬಂಧಿಸಿದ ಘಟನೆ ಬುಧವಾರ ಸಂಭವಿಸಿದೆ.

ಬೆಳ್ತಂಗಡಿ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ, ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕರಾದ ಜಯಚಂದ್ರ ಅವರು ಬಂಧನಕೊಳಗಾಗಿದ್ದು, ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ 2018ರಲ್ಲಿ ಕೊಕ್ಕಡ ಹೋಬಳಿಯ ಎನ್‌ ಸಿಆರ್ ಪೈಲ್‌ಗಳ ಕೇಸ್ ವರ್ಕರ್ ಆಗಿದ್ದ ಜಯಚಂದ್ರ ಪಿ.ಎನ್., ಇನ್ನೋರ್ವ ಆರೋಪಿ ರಾಜು ಎಂಬಾತನೊಂದಿಗೆ ಸೇರಿ ಅಕ್ರಮ ಲಾಭಗಳಿಸುವ ಉದ್ದೇಶದಿಂದ  ಸರಕಾರಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ, ತಾಲೂಕು ಕಚೇರಿಗೆ ಸಾರ್ವಜನಿಕರಿಂದ ಬಂದ ಎನ್‌ ಸಿಆರ್ ಪೈಲ್‌ಗಳನ್ನು ಅಲ್ಲಿಂದ ತೆಗೆದು ರಾಜು ಎಂಬಾತನಿಗೆ ನೀಡಿ, ಆ ಪೈಲ್‌ ಗಳನ್ನು ಆತ ತನ್ನ ವಶದಲ್ಲಿ ಬಚ್ಚಿಟ್ಟುಕೊಂಡು ಸಾರ್ವಜನಿಕರಿಗೆ  ವಂಚನೆ ಹಾಗೂ ನಂಬಿಕೆಗೆ ದ್ರೋಹ ಎಸಗಿರುವ ಬಗ್ಗೆ ಆ.16 ರಂದು ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು.


Provided by

ಸೆ.7ರಂದು ಜಯಚಂದ್ರ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ