ಕದ್ರಿ ಐತಿಹಾಸಿಕ ಬೌದ್ಧ ಸ್ಥಳ ವೀಕ್ಷಣೆ: 54 ಬೌದ್ಧ ಬಿಕ್ಕುಗಳ ಕರಾವಳಿ ಪ್ರವಾಸ - Mahanayaka
5:11 AM Wednesday 15 - October 2025

ಕದ್ರಿ ಐತಿಹಾಸಿಕ ಬೌದ್ಧ ಸ್ಥಳ ವೀಕ್ಷಣೆ: 54 ಬೌದ್ಧ ಬಿಕ್ಕುಗಳ ಕರಾವಳಿ ಪ್ರವಾಸ

buddhist bhikkhu
16/10/2021

ದಕ್ಷಿಣ ಕನ್ನಡ/ಉಡುಪಿ:  ಬೆಂಗಳೂರಿನ ಮಹಾಬೋಧಿ ಲೋಕಶಾಂತಿ ಬುದ್ಧ ವಿಹಾರದ 54 ಬೌದ್ಧ ಬಿಕ್ಕುಗಳ ತಂಡ ಕರಾವಳಿ ಪ್ರವಾಸವು ಅಕ್ಟೋಬರ್ 12ರಿಂದ  15ರವರೆಗೆ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ನಡೆಯಿತು. ಮಂಗಳೂರು ಬೌದ್ಧ ಮಹಾಸಭಾ ಮತ್ತು ಉಡುಪಿ ಬೌದ್ಧ ಮಹಾಸಭಾ ಇದರಲ್ಲಿ ಭಾಗಿಯಾಗಿತ್ತು.


Provided by

ಅಕ್ಟೋಬರ್ 13ರಂದು ಡಾ.ಮದನ್ ನಾಯಕ್ ಅವರ ಧ್ಯಾನ ಕೇಂದ್ರ(ಶ್ರೀಕೃಷ್ಣ ಧ್ಯಾನ ಕೇಂದ್ರ)ಕ್ಕೆ ಭೇಟಿ, ಬಳಿಕ ದಮ್ಮೋಪದೇಶ ನೀಡಲಾಯಿತು. ಮಂಗಳೂರು ಬೌದ್ಧ ಮಹಾಸಭಾ ಹಾಗೂ ಉಡುಪಿ ಬೌದ್ಧ ಮಹಾಸಭಾ ಭಾಗಿಯಾಗಿದ್ದರು. ಒಟ್ಟು 54 ಬಿಕ್ಕುಗಳು ಭಾಗಿಯಾಗಿದ್ದರು. ಆ ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಭವನ ಪೇಜಾವರಕ್ಕೆ ಭೇಟಿ ನೀಡಿ ಬುದ್ಧವಂದನೆ ಮತ್ತು ದಮ್ಮೋಪದೇಶ ನಡೆಸಲಾಯಿತು. ಆ ಬಳಿಕ  ಬೈಕಂಪಾಡಿಯ ಪ್ರೈಮಸಿ ಕ್ಯಾಂಡಲ್ ಫ್ಯಾಕ್ಟರಿಗೆ ಭೇಟಿ ನೀಡಿ ಜಾಗೃತಿ ಕಾರ್ಯಕ್ರಮ ನಡೆಯಿತು. ಬಳಿಕ ಪಣಂಬೂರು ಬೀಚ್ ಗೆ ಭೇಟಿ ನೀಡಿದರು.

14ರಂದು ಡಾ.ಎಂ.ವಿಜಯಬಾಣ ಶೆಟ್ಟಿ ಅವರ ಮುನಿಯಾಲ್ ಆಯುರ್ವೇದಿಕ್ ಕಾಲೇಜು ಮಣಿಪಾಲ್ ನ ಹೊಸ ಕಟ್ಟದಲ್ಲಿ ಬುದ್ಧವಂದನೆ ಹಾಗೂ ದಮ್ಮೋಪದೇಶ ನೆರವೇರಿಸಲಾಯಿತು. ಬಳಿಕ ಸೈಂಟ್ ಮೇರಿಸ್ ಐಲೇಂಡ್(Saint Mary’s iIsland)ಗೆ ಭೇಟಿ ನೀಡಲಾಯಿತು. ಆ ಬಳಿಕ ಆದಿ ಉಡುಪಿ ಅಂಬೇಡ್ಕರ್ ಭವನದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 65ನೇ ಧಮ್ಮ ದೀಕ್ಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಬುದ್ಧ ವಂದನೆ, ಧಮ್ಮೋಪದೇಶ ಮತ್ತು ಪಾನೀಯ ದಾನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಇದರಲ್ಲಿ ಬೌದ್ಧ ಮಹಾಸಂಘ ಉಡುಪಿ, ಭಾರತೀಯ ಬೌದ್ಧ ಮಹಾಸಭಾ, ಡಿಎಸ್ ಎಸ್ ಅಂಬೇಡ್ಕರ್ ವಾದ ಭಾಗವಹಿಸಿದ್ದವು.

15ರಂದು ಬೌದ್ಧ ಐತಿಹಾಸಿಕ ಸ್ಥಳ ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ, ಐತಿಹಾಸಿಕ ಬೌದ್ಧ ಕುರುಹುಗಳನ್ನು ವೀಕ್ಷಿಸಲಾಯಿತು. ಆ ಬಳಿಕ ಸೈಂಟ್ ಅಲೋಶಿಯಸ್ ಐತಿಹಾಸಿಕ ಚಾಪೆಲ್(ಚರ್ಚ್) ಗೆ ಭೇಟಿ ನೀಡಲಾಯಿತು. ಆ ಬಳಿಕ ಪಿಲಿಕುಳ ನಿಸರ್ಗ ಧಾಮಕ್ಕೆ ಭೇಟಿ ನೀಡಲಾಯಿತು. ಆ ಬಳಿಕ ವಾಮಂಜೂರು ಮಂಗಳ ಜ್ಯೋತಿ ಕೊರಗಜ್ಜ ದೈವಸ್ಥಾನದ ಆವರಣದಲ್ಲಿರುವ ಬುದ್ಧವಿಹಾರಕ್ಕೆ ಭೇಟಿ ಬುದ್ಧವಂದನೆ ದಮ್ಮೋಪದೇಶ ನಡೆಸಲಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇತ್ತೀಚಿನ ಸುದ್ದಿ