ಕಾಡುಕೋಣಗಳ ಕಾಟ: ಭಯ ಭೀತರಾದ ಕಾರ್ಮಿಕರು - Mahanayaka

ಕಾಡುಕೋಣಗಳ ಕಾಟ: ಭಯ ಭೀತರಾದ ಕಾರ್ಮಿಕರು

kadukona
28/10/2023

ಕೊಟ್ಟಿಗೆಹಾರ: ಕಾಫಿನಾಡು ಭಾಗದಲ್ಲಿ ಕಾಡಾನೆ, ಹುಲಿ, ಮಂಗಗಳ ಕಾಟ ಹೆಚ್ಚಾಗಿದ್ದು ತೋಟ ಕಾರ್ಮಿಕರು ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ಬಾರಿ ಬಣಕಲ್ ಸಮೀಪದ ಕಾಡುಗದ್ದೆ, ಜಾವಳಿ ವ್ಯಾಪ್ತಿಯಲ್ಲಿನ ರಸ್ತೆಯಲ್ಲೇ ಕಾಡುಕೋಣಗಳ ಹಾವಳಿ ಕಂಡು ಬಂದಿತ್ತು. ಈಗ ಅತ್ತಿಗೆರೆಯ ವ್ಯಾಪ್ತಿಯಲ್ಲಿನ ಕಾಫಿ ತೋಟಗಳಲ್ಲಿ ಈಗ ಕಾಡುಕೋಣಗಳು ಕಾಣ ತೊಡಗಿವೆ.

ನಿತ್ಯ ಕೆಲಸಕ್ಕೆ ಸಾಗುತ್ತಿದ್ದ ಕೂಲಿ ಕಾರ್ಮಿಕರು ಶನಿವಾರ ತೋಟಗಳಲ್ಲಿ ಕಾಡುಕೋಣಗಳ ಹಿಂಡು ಕಂಡು ಭಯಭೀತರಾಗಿ ತೋಟಗಳಲ್ಲಿ ಕೆಲಸ ಮಾಡಲಾಗದೇ ವಾಪಾಸ್ ತೆರಳ ಬೇಕಾಯಿತು. ಅರಣ್ಯ ಸಿಬ್ಬಂದಿಗೂ ಮಾಹಿತಿ ನೀಡಿದ್ದು ಪಟಾಕಿ ಸಿಡಿಸಿ ಕಾಡುಕೋಣ ಕಾಡಿಗೆ ಓಡಿಸಲು ಪ್ರಯತ್ನಿಸಲಾಯಿತು.


Provided by

ಇತ್ತೀಚಿನ ಸುದ್ದಿ