ಅತ್ಯಾಚಾರದ ಬಗ್ಗೆ ವ್ಯಂಗ್ಯ: ಸ್ಪೀಕರ್ ಕಾಗೇರಿ ಕ್ಷಮೆ ಕೇಳುವುದಿಲ್ಲವೇ? ಎಂಬ ಪ್ರಶ್ನೆಗೆ ನಿರುತ್ತರವಾದ ಯಡಿಯೂರಪ್ಪ - Mahanayaka

ಅತ್ಯಾಚಾರದ ಬಗ್ಗೆ ವ್ಯಂಗ್ಯ: ಸ್ಪೀಕರ್ ಕಾಗೇರಿ ಕ್ಷಮೆ ಕೇಳುವುದಿಲ್ಲವೇ? ಎಂಬ ಪ್ರಶ್ನೆಗೆ ನಿರುತ್ತರವಾದ ಯಡಿಯೂರಪ್ಪ

yediyurappa
17/12/2021

ಬೆಳಗಾವಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು “ಅತ್ಯಾಚಾರ”ದ ವಿಚಾರವಾಗಿ ಸದನದಲ್ಲಿ ಬೇಜಾವಬ್ದಾರಿಯ ಹೇಳಿಕೆ ನೀಡಿದ್ದು, ಈ ಸಂಬಂಧ ಇಂದು ಮಾಜಿ ಸಿಎಂ ಯಡಿಯೂರಪ್ಪ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಖಂಡನೆ ವ್ಯಕ್ತಪಡಿಸಿದರು.


Provided by

ರಮೇಶ್ ಕುಮಾರ್ ಅವರು ಒಬ್ಬ ಮಾಜಿ ಸ್ಪೀಕರ್ ಆಗಿ ಅನೇಕ ಸಂದರ್ಭಗಳಲ್ಲಿ ದೊಡ್ಡ ದೊಡ್ಡ ಉಪದೇಶ ಮಾತನಾಡುತ್ತಾರೆ. ಆದರೆ ನಿನ್ನೆ ಮಾತನಾಡಿದಂತಹ ಮಾತು, ಇಡೀ ಮಹಿಳಾ ಸಮಾಜಕ್ಕೆ ಅಪಚಾರ ಮಾಡುವಂತೆ ಅವರು ಹೇಳಿಕೆ ನೀಡಿರುವುದು ಖಂಡನೀಯ ಎಂದು ಯಡಿಯೂರಪ್ಪ ಹೇಳಿದರು.

ಮಹಿಳೆಯರ ಬಗ್ಗೆ ಬಹಳ ಹಗುರವಾಗಿ ಮಾತನಾಡುವುದರ ಮೂಲಕ,  ಎಲ್ಲ ಮಹಿಳೆಯರಿಗೆ ಅಪಮಾನ ಮಾಡುವಂತಹ ಒಂದು ಉದ್ಧಟತನದ ವರ್ತನೆ ಅವರು ಮಾಡಿದ್ದಾರೆ. ವಿಧಾನ ಸಭೆಯ ಒಳಗಡೆ ಅವರು ಮಾಡಿದಂತಹ ಅಕ್ಷಮ್ಯ ಅಪರಾಧಕ್ಕೆ ಕ್ಷಮಾಪಣೆ ಕೇಳ ಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು.


Provided by

ರಮೇಶ್ ಕುಮಾರ್ ಹೇಳಿದ ಮಾತಿಗೆ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಕ್ಕಿದ್ದಾರೆ. ಅವರು ಅದನ್ನು ಖಂಡಿಸಿಲ್ಲ ಅದರ ಬಗ್ಗೆ ಏನು ಹೇಳುತ್ತೀರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ ನಿರುತ್ತರವಾದ ಯಡಿಯೂರಪ್ಪನವರು, ನೋಡಿ ಪ್ರಶ್ನೆ ಅದಲ್ಲ,  ಆ ಸಂದರ್ಭದಲ್ಲಿ ಸ್ಪೀಕರ್ ಅವರು ತಮ್ಮದೇ ಆದ ಸಂದರ್ಭದಲ್ಲಿ ಕುಳಿತಿದ್ದರು. ಹಾಗಾಗಿ ಸ್ಪೀಕರ್ ಗೂ ಅದಕ್ಕೂ ಸಂಬಂಧವಿಲ್ಲ ಎಂದು ಉತ್ತರಿಸಲು ಪ್ರಯತ್ನಿಸಿದರು.

ಆ ಸಂದರ್ಭದಲ್ಲಿ ಸ್ಪೀಕರ್ ಖಂಡನೆ ವ್ಯಕ್ತಪಡಿಸಬೇಕಿತ್ತು. ಆದರೆ ಅವರು ಕೂಡ ಜೋರಾಗಿ ನಕ್ಕು, ಸದನ ಮುಂದುವರಿಸಿದ್ದಾರೆ ಎಂದು  ಪತ್ರಕರ್ತರು ಮರು ಪ್ರಶ್ನೆ ಹಾಕಿದಾಗ, ಆ ರೀತಿಯ ಪ್ರಶ್ನೆಗಳೇ ಇಲ್ಲ, ಈ ಅಕ್ಷಮ್ಯ ಅಪರಾಧ ಮಾಡಿದ್ದು, ರಮೇಶ್ ಕುಮಾರ್, ಅವರು ಸದನದಲ್ಲಿ ಕ್ಷಮೆಯನ್ನು ಕೇಳುತ್ತಾರೆ ಎಂದರು. ಸ್ಪೀಕರ್ ಕ್ಷಮೆ ಕೇಳುವುದಿಲ್ಲವೇ? ಎಂದು ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡದೇ ಸ್ಥಳದಿಂದ ತೆರಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

“ರೇಪ್ ತಡೆಯಲು ಆಗದಿದ್ದರೆ, ಮಲಗಿ ಎಂಜಾಯ್ ಮಾಡಬೇಕು” | ತನ್ನ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ರಮೇಶ್ ಕುಮಾರ್

ಮಗುವನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ!

ಕುಟುಂಬ ರಾಜಕಾರಣ: ವಿಧಾನ ಪರಿಷತ್ ತುಂಬ ರಾಜಕಾರಣಿಗಳ ಕರುಳ ಕುಡಿಗಳು

ಉಪ್ಪಿನಂಗಡಿ ಪೊಲೀಸರ ಕಟ್ಟುಕಥೆಗಳು: ಲಾಠಿಚಾರ್ಜ್ ಪ್ರಮಾದ ಮುಚ್ಚಿ ಹಾಕುವ ಪಿತೂರಿ: ಪಾಪ್ಯುಲರ್ ಫ್ರಂಟ್ ಆರೋಪ

ಮೊಟ್ಟೆ ವಿತರಣೆ ಕೈಬಿಡಿ, ಇಲ್ಲವೇ ಪ್ರತ್ಯೇಕ ವೆಜ್- ನಾನ್ ವೆಜ್ ಶಾಲೆ ತೆರೆಯಿರಿ | ದಯಾನಂದ ಸ್ವಾಮೀಜಿ ಒತ್ತಾಯ

ಇತ್ತೀಚಿನ ಸುದ್ದಿ