ವಿಧಾನಮಂಡಲದಲ್ಲಿ ಕೈಕೈ ಮಿಲಾಯಿಸಿದ ಕಾಂಗ್ರೆಸ್-ಬಿಜೆಪಿ ಸದಸ್ಯರು - Mahanayaka
10:19 AM Wednesday 15 - January 2025

ವಿಧಾನಮಂಡಲದಲ್ಲಿ ಕೈಕೈ ಮಿಲಾಯಿಸಿದ ಕಾಂಗ್ರೆಸ್-ಬಿಜೆಪಿ ಸದಸ್ಯರು

15/12/2020

ಬೆಂಗಳೂರು:  ರಾಜ್ಯ ವಿಧಾನಮಂಡಲದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರು ಪರಸ್ಪರ ಕೈ ಮಿಲಾಯಿಸಿಕೊಂಡ ಘಟನೆ ನಡೆದಿದ್ದು,  ವಿಧಾನ ಪರಿಷತ್ ಗೊಂದಲದ ಗೂಡಾಗಿ ಪರಿವರ್ತನೆಯಾಗಿತ್ತು.

ವಿಧಾನ ಪರಿಷತ್ ಸಭಾಪತಿ ವಿರುದ್ಧ ಹಕ್ಕು ಚ್ಯುತಿಯ ವೇಳೆ, ನಡಾವಳಿ ಮೀರಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕಿತ್ತಾಟ ನಡೆಸಿದ್ದಾರೆ.ಸಭಾಪತಿ ಸ್ಥಾನದಲ್ಲಿ ಉಪ ಸಭಾಪತಿ ಜೆಡಿಎಸ್ ನ ಧರ್ಮೇಗೌಡ ಕುಳಿತಿದ್ದದನ್ನು ಕಂಡು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಅವರನ್ನು ಎಬ್ಬಿಸಿ ಎಳೆದೊಯ್ದರು, ಈ ವೇಳೆ ನೂಕಾಟ ತಳ್ಳಾಟ ನಡೆದಿದೆ. ಸದನದ ಒಳಗೆ ಸಭಾಪತಿ ಬರದಂತೆ ಬಿಜೆಪಿಗರು ಬಾಗಿಲು ಬಳಿ ತಡೆದಿದ್ದಾರೆಂದು  ಕಾಂಗ್ರೆಸ್ ಆರೋಪಿಸಿದೆ.


ADS

ಉಪ ಸಭಾಪತಿಯವರನ್ನು ಪೀಠದಿಂದ ಕೆಳಗೆ ಇಳಿಯುವಂತೆ ಆಗ್ರಹಿಸಿದಂತ ಕಾಂಗ್ರೆಸ್ ಸದಸ್ಯರು, ಪೀಠದ ಮುಂದೆ ಧರಣಿ ಆರಂಭಿಸಿದ್ದು, ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

 ಆಡಳಿತಾರೂಢ ಬಿಜೆಪಿ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ. ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ನಿಯಮಾನುಸಾರ ಅವಿಶ್ವಾಸದ ಸೂಚನೆ ನೀಡಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದಂತ ಬಿಜೆಪಿ, ಸಭಾಧ್ಯಕ್ಷರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ನೀಡಿರುವ ಹಿನ್ನಲೆಯಲ್ಲಿ ಅವರು ಪೀಠದಲ್ಲಿ ಕುಳಿತುಕೊಳ್ಳುವಂತಿಲ್ಲ.  ಅವರ ಬದಲಿಗೆ, ಉಪ ಸಭಾಪತಿ, ಧರ್ಮೇಗೌಡ ಅವರು, ಸದನ ಕಾರ್ಯಕಲಾಪ ನಡೆಸಬೇಕೆಂದು ಆಗ್ರಹಿಸಿ, ವಿಧಾನ ಪರಿಷತ್ ನ ಕಾರ್ಯದರ್ಶಿಗೆ ಪತ್ರ ನೀಡಿದ್ದರು. ಇದನ್ನು ವಿರೋಧಿಸಿದ ಕಾಂಗ್ರೆಸ್ ಸದಸ್ಯರು, ಇಂದಿನ ಕಾರ್ಯಕಲಾಪ ಪಟ್ಟಿಯಲ್ಲಿ ಸಭಾದ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಚರ್ಚೆ ವಿಷಯ ಇಲ್ಲ. ಹೀಗಾಗಿ ಎಂದಿನಂತೆ ಸಭಾಪತಿಗಳೇ ನಿಗದಿತ ಕಾರ್ಯಕಲಾಪ ನಡೆಸಬೇಕೆಂದು ವಾದಿಸಿದರು.

 ಧರಣಿ ಆರಂಭಿಸಿದ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದತ್ತ ಧಾವಿಸಿ, ಧರ್ಮೇಂದ್ರ ಅವರನ್ನು ಕೆಳಗಿಳಿಯುವಂತೆ ಒತ್ತಾಯಿಸಿದರು. ಅಲ್ಲದೇ ಅವರ ಕೈ ಹಿಡಿದ ಎಳೆಯಲು ಮುಂದಾಗಿದ್ದು, ಈ ವೇಳೆ ಬಿಜೆಪಿ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ ತಳ್ಳಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದನ ಅನಿರ್ದಿಷ್ಠಾವಧಿಗೆ ಮುಂದೂಡಲ್ಪಟ್ಟಿದೆ.

ಇತ್ತೀಚಿನ ಸುದ್ದಿ