ಕೈಗಳನ್ನು ಕಟ್ಟಿಕೊಂಡು 780 ಮೀಟರ್ ಅಗಲದ ನದಿಯನ್ನು ಈಜಿ ದಾಟಿದ ವೃದ್ಧೆ! - Mahanayaka
11:15 AM Thursday 12 - December 2024

ಕೈಗಳನ್ನು ಕಟ್ಟಿಕೊಂಡು 780 ಮೀಟರ್ ಅಗಲದ ನದಿಯನ್ನು ಈಜಿ ದಾಟಿದ ವೃದ್ಧೆ!

periyar river
29/06/2022

ಕೊಚ್ಚಿ:  ಕೇರಳದ 70 ವರ್ಷದ ವೃದ್ಧೆ  ಕೈಗಳನ್ನು ಕಟ್ಟಿಕೊಂಡು ಇಲ್ಲಿನ  ಪೆರಿಯರ್ ನದಿಯಲ್ಲಿ ಈಜಿದ್ದು, ಈ ಮೂಲಕ ಸಾಧನೆ ಮೆರೆದಿದ್ದಾರೆ.

ಎಲ್ಲಾ ವಯೋಮಾನದವರಿಗೂ ಈಜು ಕಲಿಯಲು ಉತ್ತೇಜನ ನೀಡಲು ಇಲ್ಲಿನ ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಭಾನುವಾರ ಈಜು ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ 70 ವರ್ಷದ ಮಹಿಳೆಯೊಬ್ಬರು 780 ಮೀಟರ್ ಅಗಲದ ಪೆರಿಯಾರ್ ನದಿಯಲ್ಲಿ ಕೈಗಳನ್ನು ಕಟ್ಟಿಕೊಂಡು ಈಜಿದ್ದಾರೆ.

ಆಲುವಾದ ತೈಕ್ಕಟ್ಟುಕರದ ಆರಿಫಾ ವಿ.ಕೆ, ಕುನ್ನುಂಪುರಂನ 11 ವರ್ಷದ ಭರತ್ ಕೃಷ್ಣ ಮತ್ತು ಅಶೋಕಪುರಂನ 38 ವರ್ಷದ ಧನ್ಯ ಕೆ.ಜಿ. ಅವರೊಂದಿಗೆ ಮಡಪಂ ಕಡವುನಿಂದ ಮಣಪ್ಪುರಂ ದೇಸೊಮ್ ಕಡವುವರೆಗೆ ಈಜಿದರು.

ಇದೇ ಅಕಾಡೆಮಿಯಲ್ಲಿ ತರಬೇತಿ ಪಡೆದ ನನ್ನ ಮಕ್ಕಳನ್ನು ನೋಡಿ ನಾನು ಈಜು ಕಲಿಯಲು ನಿರ್ಧರಿಸಿದೆ. ನನ್ನ ಕುಟುಂಬದ ಒಂಬತ್ತು ಮಂದಿಗೆ ಈಜು ಗೊತ್ತು. ಈ ವರ್ಷದ ಆರಂಭದಲ್ಲಿ, ನಾನು ಪೆರಿಯಾರ್ ನದಿಯಲ್ಲಿ ಈಜುತ್ತಿದ್ದೆ. ನನ್ನ ತರಬೇತುದಾರ ಸಾಜಿ ವಳಸ್ಸೆರಿ ಅವರು ಕೈಗಳನ್ನು ಕಟ್ಟಿಕೊಂಡು ಈಜಲು ಪ್ರಯತ್ನಿಸಲು ನನಗೆ ಆತ್ಮವಿಶ್ವಾಸವನ್ನು ತುಂಬಿದರು. ಈ ಪ್ರಯತ್ನದಿಂದ ನಾನು ಹೇಳಲು ಬಯಸುವುದೇನೆಂದರೆ, ಎಲ್ಲರೂ ಈಜುವುದನ್ನು ಕಲಿಯಬೇಕು. ಮುಳುಗುವ ಭಯದಿಂದ ಜನರು ಈಜು ಕಲಿಯಲು ಹಿಂಜರಿಯಬಾರದು ಎಂದು ಅವರು ಹೇಳಿದರು.

ಈ ಮೂವರೂ ಈಜುಪಟುಗಳಿಗೆ ಕಳೆದ ವಾರದಿಂದ ಸಾಜಿ ಮತ್ತು ಅವರ ತಂಡ ವಿಶೇಷ ತರಬೇತಿ ನೀಡಿತ್ತು. ಪ್ರತಿಯೊಬ್ಬರೂ ಹೀಗೆ ಕೈಗಳನ್ನು ಕಟ್ಟಿ ಈಜುವ ಮೊದಲು ಸರಿಯಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದರು. ಮೂವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪರಿಣಿತ ಈಜುಗಾರರ ಗುಂಪು ಅವರನ್ನು ದೋಣಿಗಳಲ್ಲಿ (Boats) ಹಿಂಬಾಲಿಸಿತು.

ಬೆಳಗ್ಗೆ 8 ಗಂಟೆ ಸುಮಾರಿಗೆ ಈಜು ಆರಂಭಿಸಿದ ಅವರು ಬೆಳಗ್ಗೆ 8:45ರ ಸುಮಾರಿಗೆ ಯಶಸ್ವಿಯಾಗಿ ನದಿ ದಾಟಿದರು. ಜನರಿಗೆ ಈಜು ಕಲಿಯಲು ವಯಸ್ಸು ಅಡ್ಡಿಯಾಗುವುದಿಲ್ಲ. ಈ ಸಂದೇಶ ಸಾರುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೋಷಕರು ಮಕ್ಕಳನ್ನು ಈಜು ಕಲಿಕೆಗೆ ಕಳಿಸಬೇಕು ಎಂದು ಸಾಜಿ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೀನಾಯ ಸೋಲಿನ ನಂತರ ಒಟಿಟಿಗೆ ಕಾಲಿಟ್ಟ ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’!

ಕೊನೆಯ ಕ್ಷಣದಲ್ಲೂ ಅಂಗಾಂಗ ದಾನಿಗಳು ಸಿಗಲಿಲ್ಲ: ಖ್ಯಾತ ನಟಿಯ ಪತಿ ನಿಧನ

ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿದರೆ ಹುಷಾರ್… | ಬ್ರಾಹ್ಮಣ ಮುಖಂಡರಿಂದ ಎಚ್ಚರಿಕೆ

ಕೆಜಿಎಫ್ ಹೆಸರಿನಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಪತ್ರಕರ್ತರ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ ಕಿಚ್ಚ ಸುದೀಪ್!

 

 

ಇತ್ತೀಚಿನ ಸುದ್ದಿ