ಹನಿಮೂನ್ ಸ್ಥಳದಿಂದ ಸಂತಸದ ಕ್ಷಣಗಳನ್ನು ಹಂಚಿಕೊಂಡ ಕಾಜಲ್ ಅಗರ್ ವಾಲ್
10/11/2020
ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಹಾಗೂ ಗೌತಮ್ ಕಿಚ್ಚು ಅವರು ಇತ್ತೀಚೆಗಷ್ಟೇ ವಿವಾಹವಾಗಿ, ಹನಿಮೂನ್ ಗೆ ಹೊರಟಿದ್ದಾರೆ. ಹನಿಮೂನ್ ಗೂ ಮೊದಲೇ ಕಾಜಲ್ ಅಗರ್ ವಾಲ್ ಅವರು ತಾವು ಹೋಗಲು ನಡೆಸಿದ ಸಿದ್ಧತೆಗಳ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಇದೀಗ ಹನಿಮೂನ್ ಗೆ ತೆರಳಿದ ಬಳಿಕ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಹನಿಮೂನ್ ಸ್ಥಳದಲ್ಲಿ ಫೋಟೋ ಶೋಟ್ ಮಾಡಿರುವ ಕಾಜಲ್ ಅಗರ್ ವಾಲ್, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಡಲ ತೀರದಲ್ಲಿ ವಿವಿಧ ಉಡುಗೆಗಳಲ್ಲಿ ಕಾಜಲ್ ಫೋಟೋಗೆ ಪೋಸ್ ನೀಡಿದ್ದಾರೆ.
ಮುಂಬೈನ್ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್ ನಲ್ಲಿ ಕಾಜಲ್ ಮತ್ತು ಗೌತಮ್ ವಿವಾಹವಾಗಿದ್ದರು. ಹನಿಮೂನ್ ಸಂದರ್ಭದಲ್ಲಿ ಕೊವಿಡ್ ಮುಂಜಾಗೃತಾ ಕ್ರಮಗಳನ್ನು ತಾವು ಪಾಲಿಸಿದ್ದೇವೆ ಎಂದೂ ತಮ್ಮ ಫೋಟೋದ ಜೊತೆಗೆ ಕಾಜಲ್ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಪ್ರೀತಿ ಪಾತ್ರರಿಗೆ ಅವರು ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.