ಫೆ.12 ರಂದು ಕಾಜೂರು ಉರೂಸ್ ಸಮಾರೋಪ, ಸರ್ವಧರ್ಮ ಸಭೆ

kajuru urus
11/02/2023

ಬೆಳ್ತಂಗಡಿ; ಇತಿಹಾಸ ಪ್ರಸಿದ್ಧ ಸರ್ವಧರ್ಮೀಯರ ಸೌಹಾರ್ದ ಕ್ಷೇತ್ರವಾದ ಕಾಜೂರು ಮಖಾಂ ಶರೀಫ್ ಉರೂಸ್ ಕಾರ್ಯಕ್ರಮಕ್ಕೆ ಫೆ.12 ರಂದು ತೆರೆಬೀಳಲಿದೆ.‌‌

ಉರೂಸಿನ  ಏಳನೇ ದಿನ ಬೃಹತ್ ದಿಕ್ರ್ ಮಜ್ಲಿಸ್ ‌ಮತ್ತು‌ ಅಧ್ಯಾತ್ಮಿಕ ಸಂಗಮ, ಫೆ.10 ರಂದು ಮುತ‌ಅಲ್ಲಿಂ ಸಂಗಮ ಮತ್ತು ಉಲಮಾ ಸಮಾವೇಶ ನಡೆಯಿತು.

ಫೆ. 12 ರಂದು ಬೆಳಿಗ್ಗೆ 11.00 ಕ್ಕೆ ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆಯಲ್ಲಿ  ಕಾಜೂರು ಮೌಲೀದ್ ಪಾರಾಯಣ, ಸಾಮೂಹಿಕ ಪ್ರಾರ್ಥನೆ, ಸಂದಲ್ ಮೆರವಣಿಗೆ, ಖತ್ಮುಲ್ ಕುರ್‌ಆನ್ ಸಮರ್ಪಣೆ ನಡೆಯಲಿದೆ.

ಸಂಜೆ  7ಕ್ಕೆ ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ  ಮೌಲಾನಾ ಶಾಫಿ ಸ‌ಅದಿ ಅಧ್ಯಕ್ಷತೆಯಲ್ಲಿ  ಸರ್ವಧರ್ಮೀಯರ ಸೌಹಾರ್ದ ಸಂಗಮ‌ ನಡೆಯಲಿದ್ದು, ಯೆನೆಪೋಯ ವಿವಿ ಕುಲಪತಿ ಅಬ್ದುಲ್ಲಕುಂಞಿ ಉದ್ಘಾಟಿಸಲಿದ್ದಾರೆ.

ಬಿ.ಕೆ ಹರಿಪ್ರಸಾದ್, ಯು.ಟಿ ಖಾದರ್, ಶಾಸಕ ಹರೀಶ್ ಪೂಂಜ, ಸಂಸದ ನಳಿನ್ ಕುಮಾರ್ ಕಟೀಲ್, ಝಮೀರ್ ಅಹಮ್ಮದ್, ಎಂಎಲ್‌ ಸಿಗಳಾದ ಕೆ‌ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್,  ಬಿ.ಎಮ್ ಫಾರೂಕ್,  ಅಝೀಝ್ ದಾರಿಮಿ ಚೊಕ್ಕಬೆಟ್ಟು ಸಹಿತ ಪ್ರಮುಖ ಗಣ್ಯರು, ರಾಜಕೀಯ ಸಾಮಾಜಿಕ ಕ್ಷೇತ್ರದ ನಾಯಕರುಗಳು ಭಾಗವಹಿಸಲಿದ್ದಾರೆ. ರಾತ್ರಿ ಅನ್ನದಾನ ನಡೆಯಲಿದೆ. ‌

ಉರೂಸಿನ ಪ್ರಯುಕ್ತ ಕಾಜೂರು ದರ್ಗಾಶರೀಫ್ ಅನ್ನು ಭಕ್ತರು ವಿಶೇಷವಾಗಿ ಹೂವಿನ ಅಲಂಕಾರದಿಂದ ಶೃಂಗರಿಸಿದ್ದಾರೆ. ಕರಾವಳಿ ಭಾಗ ಮಾತ್ರವಲ್ಲದೆ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದಾವಣಗೆರೆ, ಸಹಿತ ಉತ್ತರ ಕರ್ನಾಟಕ ಭಾಗದಿಂದ,  ಕೇರಳ‌ ಮತ್ತು ತಮಿಳುನಾಡು ಭಾಗದಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇಷ್ಟಾರ್ಥ ಗಳಿಗಾಗಿ ಪ್ರಾರ್ಥ ಸಲ್ಲಿಸುತ್ತಿದ್ದಾರೆ. ಮಹಿಳೆಯರಿಗೆ  ಪ್ರತ್ಯೇಕ ಸ್ಥಳಾವಕಾಶ ಏರ್ಪಡಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version