ಹೊಟ್ಟೆ ಕಿಚ್ಚಿನಿಂದ ಅಬ್ದುಲ್ ಕಲಾಂ ಅಭಿಮಾನಿಯ ಹತ್ಯೆ ಮಾಡಿದ ದುಷ್ಕರ್ಮಿ

20/12/2020

ಕೊಚ್ಚಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದ ವೃದ್ಧರೊಬ್ಬರನ್ನು ಅಸೂಯೆಯಿಂದ ಕೊಂದು ಹಾಕಿದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದ್ದು,  ಇಲ್ಲಿನ ಮರೀನ್ ಡ್ರೈವ್ ನಲ್ಲಿರುವ ಶಿವದಾಸನ್(63) ಹತ್ಯೆಗೀಡಾದವರಾಗಿದ್ದಾರೆ.

ಶಿವದಾಸನ್ ಅವರು ನಗರದಲ್ಲಿರುವ ಅಬ್ದುಲ್ ಕಲಾಂ ಅವರ ಪ್ರತಿಮೆಗೆ ಪ್ರತಿದಿನ ಹೂವಿನ ಅಲಂಕಾರ ಮಾಡುತ್ತಿದ್ದರು. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿವದಾಸನ್ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್  ಆಗಿರುವುದನ್ನು ಕಂಡು ರಾಜೇಶ್ ಎಂಬಾತ ತೀವ್ರವಾಗಿ ಹೊಟ್ಟೆ ಕಿಚ್ಚುಪಟ್ಟಿದ್ದ.

ಇದೇ ವಿಚಾರವಾಗಿ ಶಿವದಾಸನ್ ಜೊತೆಗೆ ರಾಜೇಶ್ ಜಗಳವಾಡಿದ್ದು, ಜಗಳವಾಡಿ ಕೆಲವೇ ದಿನಗಳಲ್ಲಿ ಅಬ್ದುಲ್ ಕಲಾಂ ಪ್ರತಿಮೆಯ ಬಳಿಯಲ್ಲಿ ಎಂದಿನಂತೆ ಮಲಗಿದ್ದ ಶಿವದಾಸನ್ ಅದೇ ಸ್ಥಳದಲ್ಲಿ ಹತ್ಯೆಗೀಡಾಗಿದ್ದರು.  ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ರಾಜೇಶ್ ನ ವಿಚಾರ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version