ರಸ್ತೆಗೆ ತೆಂಗಿನ ಕಾಯಿ ಒಡೆದು ಉದ್ಘಾಟನೆ: ತೆಂಗಿನ ಕಾಯಿ ಬದಲು ಬಿರುಕು ಬಿಟ್ಟ ರಸ್ತೆ | ಬಿಜೆಪಿ ಶಾಸಕಿಗೆ ಮುಜುಗರ

road
04/12/2021

ಲಕ್ನೋ: 1.16  ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆಯೊಂದು ಉದ್ಘಾಟನೆ ವೇಳೆ  ತೆಂಗಿನ ಕಾಯಿ ಒಡೆಯವ ಸಂದರ್ಭದಲ್ಲಿ ಬಿರುಕು ಬಿಟ್ಟ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ರಸ್ತೆಗೆ ತೆಂಗಿನ ಕಾಯಿ ಒಡೆದಾಗ ತೆಂಗಿನ ಕಾಯಿಯ ಬದಲು ರಸ್ತೆ ಬಿರುಕು ಬಿಟ್ಟಿದ್ದು, ಉದ್ಘಾಟನೆಗೆ ಬಂದ ಬಿಜೆಪಿ ಶಾಸಕಿ ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ.

ಬಿಜೆಪಿ ಶಾಸಕಿ ಸುಚಿ ಮೌಸಂ ಚೌದರಿ ಅವರ ಕ್ಷೇತ್ರದ 7 ಕಿ.ಮೀ. ರಸ್ತೆ ನಿರ್ಮಾಣಕ್ಕೆ  1.16 ಕೋಟಿ ರೂಪಾಯಿ ಮಂಜೂರಾಗಿತ್ತು. ರಸ್ತೆ ನಿರ್ಮಾಣ ಪೂರ್ಣಗೊಂಡ ಬಳಿಕ ಬಿಜೆಪಿ ಶಾಸಕಿ ಉದ್ಘಾಟನೆಗೆ ಆಗಮಿಸಿದ್ದು, ರಸ್ತೆಗೆ ತೆಂಗಿನ ಕಾಯಿ ಒಡೆದು ಉದ್ಘಾಟನೆ ಮಾಡಿದಾಗ ತೆಂಗಿನ ಕಾಯಿ ಒಡೆಯಲಿಲ್ಲ. ಬದಲಾಗಿ  ಹೊಸ ರಸ್ತೆಯೇ ಬಿರುಕು ಬಿಟ್ಟಿದ್ದು, ಇದರಿಂದಾಗಿ ಶಾಸಕಿ ತೀವ್ರವಾಗಿ ಮುಜುಗರಕ್ಕೊಳಗಾದರು.

ಇನ್ನೂ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕಿ ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದರು. ಜೊತೆಗೆ ಕಳಪೆ ಕಾಮಗಾರಿಯನ್ನು ಪರಿಶೀಲನೆ ನಡೆಸಲು ಸ್ಥಳಕ್ಕೆ ಅಧಿಕಾರಿಗಳು ಬರುವವರೆಗೂ  ಸುಮಾರು 3 ಗಂಟೆಗಳ ಕಾಲ ಶಾಸಕಿ ಸ್ಥಳದಲ್ಲಿಯೇ ಕಾದು ಕುಳಿತಿದ್ದರು ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರು: ಶಾಲಾ ವಾಹನ ಚಾಲಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ!

ಈರುಳ್ಳಿ ಸಾಗಾಟದ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ನಾಲ್ವರು ಸ್ಥಳದಲ್ಲೇ ಸಾವು

‘BTV’ ಅಮೂಲ್ಯ ಸುದ್ದಿ ವಿಚಾರ: “ನಿಮ್ಮ ಪತ್ರಿಕೆ ಮದ್ವೆ ಸುದ್ದಿ ಮಾಡಿಲ್ವಾ?” | “ಒಂದು ಇಮೋಜಿಗೆ ಇಷ್ಟು ಉರ್ಕೊಂಡ್ರೆ ಹೇಗೆ?” | ಪರ ವಿರೋಧ ಚರ್ಚೆ!

ಪಬ್ ನಲ್ಲಿ ಕಿರಿಕ್: ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿಗೆ ಬಿಯರ್ ಬಾಟಲಿಯಿಂದ ಹಲ್ಲೆ

ಒಮಿಕ್ರಾನ್ ಡೆಲ್ಟಾಕ್ಕಿಂತ ಅಪಾಯಕಾರಿ ಅಲ್ಲ: ಈ ವೈರಸ್ ನ್ನು ಕಂಡು ಹಿಡಿದ ಡಾಕ್ಟರ್ ಆ್ಯಂಜಲಿಕ್ ಹೇಳಿದ್ದೇನು?

ಇತ್ತೀಚಿನ ಸುದ್ದಿ

Exit mobile version