ಕಾಡುಕೋಣ ದಾಳಿಗೆ ರೈತ ಬಲಿ ಹಿನ್ನೆಲೆ ಕಳಸ ಬಂದ್!

ಚಿಕ್ಕಮಗಳೂರು: ಕಾಡುಕೋಣ ದಾಳಿಗೆ ರೈತನ ಸಾವು ಖಂಡಿಸಿ ಕಳಸ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಕಳಸ ಪಟ್ಟಣದಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಆರಂಭವಾಗಿದೆ.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಾಂಕೇತಿಕ ಬಂದ್ ನಡೆಯಲಿದೆ. ಅಂಗಡಿ–ಮುಂಗಟ್ಟುಗಳನ್ನ ಸ್ವಯಂಪ್ರೇರಿತವಾಗಿ ಗ್ರಾಹಕರು ಬಂದ್ ಮಾಡುತ್ತಿದ್ದಾರೆ.
ಇಂದು ದಕ್ಷಿಣಕಾಶಿ ಕಳಸೇಶ್ವರ ಸ್ವಾಮಿ ಜಾತ್ರೆ ಹಿನ್ನೆಲೆ 2 ಗಂಟೆಗೆ ಬಂದ್ ಮುಕ್ತಾಯವಾಗಲಿದೆ. ಶಾಲಾ–ಕಾಲೇಜು, ಆಟೋ, ಬಸ್ಸು ಯಾವುದಕ್ಕೂ ತೊಂದರೆ ಇಲ್ಲ.
ಸರ್ಕಾರದ ಗಮನ ಸೆಳೆಯಲು ಸಾಂಕೇತಿಕ ಪ್ರತಿಭಟನೆಗೆ ಕರೆ ನೀಡಲಾಗಿದೆ. ಕಾಡಿನ ತಾಲೂಕು ಕಳಸದಲ್ಲಿ ಕಾಡುಕೋಣಗಳ ದಾಳಿ ನಿರಂತವಾಗುತ್ತಿದೆ. ಕಾಡುಕೋಣ ದಾಳಿಗೆ ಶಾಶ್ವತ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸರ್ಕಾರ, ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವಪಕ್ಷ, ವಿವಿಧ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: