ಸ್ನೇಹಿತನ ಚಿನ್ನದಂಗಡಿಯಲ್ಲಿ ಕಳವು ನಡೆಸಲು ಸುಪಾರಿ ನೀಡಿದ ಇನ್ನೊಂದು ಚಿನ್ನದಂಗಡಿ ಮಾಲಿಕ!
ಬೆಂಗಳೂರು: ಚಿನ್ನದಂಗಡಿಯ ಮಾಲಿಕನೋರ್ವ ಇನ್ನೊಂದು ಚಿನ್ನದಂಗಡಿಯಿಂದ ಕಳವು ನಡೆಸಲು ಸುಪಾರಿ ನೀಡಿದ ಘಟನೆ ನಡೆದಿದ್ದು, ಇದೀಗ ಸುಪಾರಿ ನೀಡಿದ ಮಾಲಿಕನ ಸಹಿತ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸುನೀಲ್ ಮಾಲಿ ಎಂಬಾತ ಬಂಧಿತ ಚಿನ್ನಾಭರಣ ಮಳಿಗೆಯ ಮಾಲಿಕ ಎಂದು ತಿಳಿದು ಬಂದಿದ್ದು, ಈತ “ಗಣೇಶ್ ಕಾರ್ಪ್” ಎಂಬ ಮತ್ತೊಂದು ಚಿನ್ನದ ಅಂಗಡಿ ಮಾಲಿಕನ ಸ್ನೇಹಿತನಾಗಿದ್ದ. ಸ್ನೇಹಿತ ಗಣೇಶ್ ಚಿನ್ನದ ಗಟ್ಟಿ ಖರೀದಿ ಮಾಡಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸುನೀಲ್ ಕಳ್ಳತನ ನಡೆಸಲು ಯೋಜನೆ ರೂಪಿಸಿದ್ದ.
ರಾಜಸ್ಥಾನದ ಕಳ್ಳರ ತಂಡವನ್ನು ಬೆಂಗಳೂರಿಗೆ ಕರೆಸಿದ ಸುನೀಲ್ ಮಾಲಿ, ಅಮಾವಸ್ಯೆಯ ದಿನದಂದೇ 24 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ಹಾಗೂ ಒಂದೂವರೆ ಲಕ್ಷ ನಗದು ದೋಚಿ ಪರಾರಿಯಾಗಿದ್ದರು.
ಕಳ್ಳರು ಎಷ್ಟೇ ಬುದ್ಧಿವಂತಿಕೆ ಮೆರೆದರೂ ಪೊಲೀಸರ ಚಾಣಾಕ್ಷ್ಯ ತನದ ಮುಂದೆ ಅವರ ಆಟ ನಡೆಯಲಿಲ್ಲ. ಕೊನೆಗೂ ಇದೀಗ ಸುನೀಲ್ ಮಾಲಿ ಸೇರಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಜೊತೆಗೆ ಕಳವು ಮಾಡಲಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ವಿಪರೀತ ಸಾಲವಿರುವ ಹಿನ್ನೆಲೆಯಲ್ಲಿ ಸುನೀಲ್ ಮಾಲಿ ತನ್ನ ಸ್ನೇಹಿತನ ಅಂಗಡಿಯನ್ನೇ ದೋಚಲು ಸುಪಾರಿ ನೀಡಿದ್ದ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾಜ್ ಕುಮಾರ ಸಿನಿಮಾ ನೋಡ್ಲೇ ಬೇಕು ಮಾಮಾ ಅಂದಿದ್ರು ಪುನೀತ್ | ಸಿದ್ದರಾಮಯ್ಯ
ಖಿದ್ಮಾ ಫೌಂಡೇಶನ್ ಕರ್ನಾಟಕ ವತಿಯಿಂದ ರಾಜ್ಯ ಮಟ್ಟದ ಆನ್ ಲೈನ್ ಕವನ ಸ್ಪರ್ಧೆ
ಹಾಸ್ಟೆಲ್ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಭದ್ರತಾ ಸಿಬ್ಬಂದಿ ಅರೆಸ್ಟ್
ತಮಿಳುನಾಡಿನಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು!
ಸಮಸ್ಯೆ ಹೇಳಿಕೊಳ್ಳಲು ಬಂದವರಿಗೆ ಗದರಿದ ಮಾಜಿ ಸಿಎಂ ಸಿದ್ದರಾಮಯ್ಯ!| ಕಾರಣ ಏನು ಗೊತ್ತಾ?
“ಮಠಕ್ಕೆ ಬಂದು ತತ್ತಿ ತಂತೀವಿ” | ಮೊಟ್ಟೆ ವಿರೋಧಿ ಮಠಾಧೀಶರ ಬೆಂಡೆತ್ತಿದ ಮಕ್ಕಳು