ಕಳ್ಳಭಟ್ಟಿ ಸೇವಿಸಿ ಮತ್ತೆ ಐವರು ಸಾವು: ಮುಂದುವರಿದ ಸಾವಿನ ಸರಣಿ
ಪಾಟ್ನಾ: ನಕಲಿ ಮದ್ಯ ಸೇವಿಸಿ ಐವರು ಸಾವನ್ನಪ್ಪಿ, ನಾಲ್ವರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯ ದುಮ್ರಾವ್ ನಲ್ಲಿ ನಡೆದಿದೆ.
ಮುರಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಅನ್ಸಾರಿ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಬಿಹಾರದ ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವನೆಯಿಂದ ಐದು ಮಂದಿ ಸಾವನ್ನಪ್ಪಿದ ಒಂದು ವಾರದೊಳಗೆ ಮತ್ತೆ ದುರಂತ ಸಂಭವಿಸಿದೆ. ಅದಕ್ಕೂ ಒಂದು ವಾರದ ಮೊದಲು, ನಳಂದಾ ಜಿಲ್ಲೆಯ ಅಧಿಕಾರಿಗಳು ನಕಲಿ ಮದ್ಯ ಸೇವನೆಯಿಂದ 11 ಮಂದಿ ಸಾವಿಗೀಡಾಗಿದ್ದನ್ನು ದೃಢಪಡಿಸಿದ್ದರು.
ಐವರ ಸಾವಿನ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಬಕ್ಸರ್ ಎಸ್ಪಿ ನೀರಜ್ ಕುಮಾರ್ ಸಿಂಗ್ ಹೇಳಿದ್ದಾರೆ.
2021ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಜನರು ನಕಲಿಮದ್ಯ ಅಥವಾ ಕಳ್ಳ ಭಟ್ಟಿ ಸೇವಿಸಿದ ನಂತರ ಸಾವನ್ನಪ್ಪಿದ್ದಾರೆ. ದುರಂತದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತನಿಖೆ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿರುವ ಜಡ್ಜ್ ವಜಾಕ್ಕೆ ಶಾಸಕ ಕೆ.ಶಿವನಗೌಡ ಒತ್ತಾಯ
ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲೇ ಕಾಲ ಕಳೆಯುತ್ತಿದೆ: ಪ್ರಿಯಾಂಕ ಖರ್ಗೆ
ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾ ಮಹಿಳೆಯ ಬಂಧನ
ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಗೆ ಗುಡ್ ಬೈ
ಅಂಬೇಡ್ಕರ್ ಪ್ರತಿಮೆಗೆ ಅವಮಾನ: ವಿಧಾನಸೌಧದ ಎದುರು ಸಂವಿಧಾನ ಪರ ಸಂಘಟನೆಗಳಿಂದ ಪ್ರತಿಭಟನೆ