ಕಲ್ಲಡ್ಕ ಪ್ರಭಾಕರ್ ಭಟ್ ಗೆ ಕೊರಗಜ್ಜನ ಶಾಪ ತಟ್ಟಿದೆ | ಯು.ಟಿ.ಖಾದರ್ - Mahanayaka

ಕಲ್ಲಡ್ಕ ಪ್ರಭಾಕರ್ ಭಟ್ ಗೆ ಕೊರಗಜ್ಜನ ಶಾಪ ತಟ್ಟಿದೆ | ಯು.ಟಿ.ಖಾದರ್

30/01/2021

ಮಂಗಳೂರು:  ತುಳುನಾಡಿನ ದೈವ ಕೊರಗಜ್ಜ ಮತ್ತು ಪಾತ್ರಿಯನ್ನು ದೂಷಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಕೊರಗಜ್ಜನ ಶಾಪ ತಟ್ಟಿದೆ. ಹೀಗಾಗಿ ಅವರು ದೇಶ ಹಾಗೂ ಸಮಾಜಕ್ಕೆ ಮಾರಕವಾಗಿರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.


Provided by

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯು.ಟಿ.ಖಾದರ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಉಳ್ಳಾಲ ಪಾಕಿಸ್ತಾನ, ಮುಸ್ಲಿಮೇತರರನ್ನು ಉಳ್ಳಾಲದಲ್ಲಿ ತಾಕತ್ ಇದ್ರೆ ಆಯ್ಕೆ ಮಾಡಿ ಎಂಬ ಹೇಳಿಕೆಗಳನ್ನು ಪ್ರಭಾಕರ್ ಭಟ್ ಹೇಳಿದ್ದರು, ಈ ಸಂಬಂಧ ಪ್ರತಿಕ್ರಿಯಿಸಿರುವ ಯು.ಟಿ.ಖಾದರ್,  ತನ್ನನ್ನು ಜನರು ಅಭಿವೃದ್ಧಿ ಹಾಗೂ ಮಾನವೀಯತೆಯ ಆಧಾರದಲ್ಲಿ ಆಯ್ಕೆ ಮಾಡಿದ್ದಾರೆ. ಭಟ್ ನನ್ನ ಕ್ಷೇತ್ರದವರಲ್ಲ ಎಂದು ಹೇಳಿದ್ದಾರೆ.

ಭಾರತದ ಒಂದು ಪ್ರದೇಶವನ್ನು ಪಾಕಿಸ್ತಾನ ಎಂದು ಕರೆದರೆ ಅದು ದೇಶದ್ರೋಹವಾಗುತ್ತದೆ. ಉಳ್ಳಾಲ ಕ್ಷೇತ್ರದಲ್ಲಿ ಈ ಹಿಂದೆ ಬೇರೆ ಧರ್ಮದವರು ಕೂಡ ಶಾಸಕರಾಗಿ ಆಯ್ಕೆಯಾಗಿದ್ದರು ಎಂದು ಅವರು ಹೇಳಿದರು.

ಕೊವಿಡ್ ಬಂದಾಗ ಭಟ್ ಎಲ್ಲಿ ಹೋಗಿದ್ದರು? ಯಾರಾದರೂ ಹಿಂದೂ ಸಹೋದರರನ್ನು ಆಸ್ಪತ್ರೆಗೆ ಹೋಗಿ ಅವರು ನೋಡಿದ್ದಾರಾ? ಕೊವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವಾಗ ಭಟ್ ಮನೆಯಿಂದ ಹೊರಗೆ ಬಂದಿದ್ದಾರಾ? ಎಂದು ಮಾರ್ಮಿಕವಾಗಿ ಅವರು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ