ಈಜುಕೊಳ ಎಂದು ಭಾವಿಸಿ ರಸ್ತೆ ಕಾಮಗಾರಿಗೆ ತೆಗೆದ ಹೊಂಡದಲ್ಲಿ ಈಜಿದ ವ್ಯಕ್ತಿ!
ವ್ಯಕ್ತಿಯೋರ್ವ ಹೊಂಡದಲ್ಲಿ ತುಂಬಿದ ಮಳೆ ನೀರಿನಲ್ಲಿ ಈಜಾಟ ನಡೆಸುತ್ತಿರುವ ದೃಶ್ಯ ಮಂಗಳೂರು – ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡು ಅಡ್ಡಹೊಳೆ ಚತುಷ್ಪಥ ರಸ್ತೆಯಲ್ಲಿ ಕಂಡುಬಂದಿದೆ. ಕಾಮಗಾರಿ ಕೆಲಸ ನಡೆಯುತ್ತಿರುವುದರಿಂದ ಹೊಂಡಗಳಲ್ಲಿ ಮಳೆ ನೀರು ನಿಂತಿದೆ.
ಬಿ.ಸಿ.ರೋಡಿನಿಂದ ಮಾಣಿಯವರೆಗೆ ಅಸಮರ್ಪಕ ರಸ್ತೆ ಕಾಮಗಾರಿಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ರೆ ಇನ್ನೊಂದೆಡೆ ಪ್ರಯಾಣಿಕರ ವಾಹನಗಳು ಹೊಂಡದಲ್ಲಿ ಸಿಲುಕಿ ಜಖಂಗೊಳ್ಳುತ್ತಿವೆ.
ಅದ್ರಲ್ಲೂ ಕಲ್ಲಡ್ಕ ಪೇಟೆಯಲ್ಲೂ ವಾಹನದಟ್ಟಣೆ ಉಂಟಾಗುತ್ತಿದೆ. ಇಲ್ಲಿ ಬೃಹತ್ ಫ್ಲೈಓವರ್ ನಿರ್ಮಾಣಕ್ಕೆ ಅಗೆಯಲಾದ ಹೊಂಡ ಮತ್ತಷ್ಟು ಅಗಲವಾಗಿದೆ. ಕಲ್ಲಡ್ಕದ ಹೈವೇ ಕಾಮಗಾರಿ ಬಳಿಯಲ್ಲಿ ಮುಂಜಾಗೃತಾ ಕ್ರಮವಾಗಿ ಗುಂಡಿಯ ಸುತ್ತ ಪ್ಲಾಸ್ಟಿಕ್ ಟೇಪ್ ಅನ್ನು ಕಟ್ಟಲಾಗಿದ್ದರೂ ಅದರ ಪಕ್ಕದ ಹೊಂಡದಲ್ಲಿ ಮಾನಸಿಕ ಅಸ್ವಸ್ಥನಂತೆ ಕಾಣುವ ವ್ಯಕ್ತಿಯೊಬ್ಬ ಈಜಾಟ ನಡೆಸಿದ್ದಾನೆ.
ಜೊತೆಗೆ ಸ್ನಾನ ಮಾಡುವಂತೆ ಹೊರಳಾಡಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka