30 ಅಡಿ ಆಳದ ಕಾಲುವೆಗೆ ಬಿದ್ದ ಬಸ್; 32 ಪ್ರಯಾಣಿಕರ ದಾರುಣ ಸಾವು - Mahanayaka

30 ಅಡಿ ಆಳದ ಕಾಲುವೆಗೆ ಬಿದ್ದ ಬಸ್; 32 ಪ್ರಯಾಣಿಕರ ದಾರುಣ ಸಾವು

16/02/2021

ಸಿಧಿ: 30 ಅಡಿ ಆಳದ ಕಾಲುವೆಗೆ ಬಸ್ ಬಿದ್ದ ಪರಿಣಾಮ32 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದ್ದು, ಸತ್ನಾಕ್ಕೆ  54 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಈ ಭೀಕರ ಅಪಘಾತಕ್ಕೆ ಕಾರಣವಾಗಿದೆ.


Provided by

ಇಂದು ಬೆಳಗ್ಗೆ 8:30ರ ವೇಳೆಗೆ ಬಸ್ ಕಾಲುವೆಗೆ ಬಿದ್ದಿದೆ. ಕಾಲುವೆಗೆ ಬಿದ್ದ ತಕ್ಷಣವೇ ಬಸ್ ಮುಳುಗಿದೆ. ಬಸ್ ನಲ್ಲಿದ್ದ 54 ಮಂದಿಯ ಪೈಕಿ  7 ಮಂದಿಯನ್ನು ರಕ್ಷಣಾ ತಂಡ ರಕ್ಷಿಸಿದೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.

ಬಸ್ ನಲ್ಲಿದ್ದ 32 ಜನರು ಸಾವನ್ನಪ್ಪಿದ್ದಾರೆ ಎಂದು ಇನ್ಸ್ ಪೆಕ್ಟರ್ ಜನರಲ್ ಉಮೇಶ್ ಜೋಗಾ ತಿಳಿಸಿದ್ದಾರೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತನಿಖೆಗೆ ಆದೇಶ ಹೊರಡಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ