ಕಲ್ಯಾಣ ಮಂಟಪದಲ್ಲಿಯೇ ಗೊರಕೆ ಹೊಡೆದ ವರ | ನಿದ್ದೆಯಿಂದ ಎಬ್ಬಿಸಲು ಹೋದ ಕುಟುಂಬಸ್ಥರು ಸುಸ್ತು!

marriage
15/07/2021

ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳು ನಿದ್ದೆ ಮಾಡಿ ಗೊರಕೆ ಹೊಡೆಯುವುದು ಸುದ್ದಿಯಾಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ  ವರ ತನ್ನ ಮದುವೆಯಂದು ವಧು-ವರ ವೇದಿಕೆಯಲ್ಲಿ ಕುಳಿತಿರುವಾಗಲೇ ಗಡದ್ದಾಗಿ ನಿದ್ದೆಗೆ ಜಾರಿದ ಘಟನೆ ನಡೆದಿದೆ.

ಈ ರೀತಿಯದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವರ ಗಡದ್ದಾಗಿ ನಿದ್ದೆ ಮಾಡುತ್ತಿದ್ದರೆ, ಆತನ ಅಕ್ಕಪಕ್ಕದಲ್ಲಿದ್ದವರು ಆತನನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವರ ನಿದ್ದೆ ಮಾಡಿದ್ದಾನೆ ಎಂದು ಕೆಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಆತ ನಿದ್ದೆ ಮಾಡಿದ್ದಾನೆ ಎಂದು ಹೇಳಿದ್ದಾನೆ. ಮದುವೆ ಎನ್ನುವ ಕಾರಣಕ್ಕಾಗಿ ವರನಿಗೆ ಹಿಂದಿನ ದಿನ ನಿದ್ದೆ ಬಂದಿಲ್ಲ. ಮರು ದಿನ ಕಲ್ಯಾಣ ಮಂಟಪದಲ್ಲಿ ವಧುವಿನ ಪಕ್ಕದಲ್ಲಿಯೇ ನಿದ್ದೆ ಮಾಡುತ್ತಿದ್ದಾನೆ ಎಂದು ಇನ್ನಷ್ಟು ಜನರು ಕಮೆಂಟ್ ಮಾಡಿ ಹಾಸ್ಯ ಚಟಾಕಿ ಹರಿಸಿದ್ದಾರೆ.

ಒಟ್ಟಿನಲ್ಲಿ ಈ ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗಿದ್ದು, ಈ ವಿಡಿಯೋಗೆ ಒಬ್ಬೊಬ್ಬರು ಒಂದೊಂದು ಸರ್ಟಿಫಿಕೆಟ್ ನೀಡುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು:

 

ತಾಯಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಳು ಎಂದ ಮಗ | ಕೊನೆಗೂ ಬಯಲಾಯ್ತು ಸತ್ಯ!

“ಅಪಘಾತ ಹೇಗಾಯ್ತು?” ಎಂದು ಕೇಳಿದಕ್ಕೆ “ಟಿಶ್ಕ್ಯಾವ್” ಅಂತ ಆಯ್ತು ಎಂದ ಜಗ್ಗೇಶ್ ಪುತ್ರ!

ಕಷ್ಟಕರ ಯೋಗದ ಭಂಗಿಗಳೂ ಈ 4ರ ಬಾಲಕಿಗೆ ಅತಿ ಸುಲಭ | ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪ್ರಿಯದರ್ಶಿನಿ

ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ಬಂದ ಮೇಘ ಶೆಟ್ಟಿ | ಅನು ಪಾತ್ರ ಮುಂದೆ ಯಾರು ನಿರ್ವಹಿಸಲಿದ್ದಾರೆ?

ಇತ್ತೀಚಿನ ಸುದ್ದಿ

Exit mobile version