ಇನ್ನು ಮುಂದೆ ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದ ಕಮಲ್ ಹಾಸನ್: ಕಾರಣ ಏನು? - Mahanayaka
5:26 PM Thursday 12 - December 2024

ಇನ್ನು ಮುಂದೆ ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದ ಕಮಲ್ ಹಾಸನ್: ಕಾರಣ ಏನು?

kamal haasan
07/08/2024

ಕಳೆದ 7 ವರ್ಷಗಳಿಂದಲೂ ತಮಿಳು ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದ ಕಮಲ್ ಹಾಸನ್ ಇದೀಗ ಬಿಗ್ ಬಾಸ್ ಶೋ ಮಾಡಲ್ಲ ಅಂತ ಅಭಿಮಾನಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಬಿಗ್ ಬಾಸ್ ನಲ್ಲಿ ಕಮಲ್ ಹಾಸನ್ ಅವರ ನಿರೂಪಣೆ ಶೈಲಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಇದೀಗ ಬಿಗ್ ಬಾಸ್ ಶೋದಿಂದ ಬ್ರೇಕ್ ಪಡೆಯಲು ಅವರು ನಿರ್ಧರಿಸಿದ್ದಾರೆ ಎಂದು ಘೋಷಿಸಿದ್ದಾರೆ.

7 ವರ್ಷಗಳ ಹಿಂದೆ ಆರಂಭವಾಗಿದ್ದ ಬಿಗ್ ಬಾಸ್ ಪ್ರಯಾಣಿಕ್ಕೆ  ಬ್ರೇಕ್ ಹಾಕಲು ನಿರ್ಧಾರ ಮಾಡಿದ್ದೇನೆ. ಈ ವಿಷಯವನ್ನು ಭಾರವಾದ ಹೃದಯದಿಂದ ತಿಳಿಸುತ್ತಿದ್ದೇನೆ. ಮೊದಲೇ ಒಪ್ಪಿಕೊಂಡ ಕೆಲಸಗಳ ಕಾರಣದಿಂದಾಗಿ ನನಗೆ ಈ ಬಾರಿ ಬಿಗ್ ಬಾಸ್ ಶೋ ನಿರೂಪಣೆ ಸಾಧ್ಯವಾಗುತ್ತಿಲ್ಲ ಎಂದು ಕಮಲ್ ಹಾಸನ್ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ನಿಮ್ಮನ್ನು ತಲುಪಿದ್ದೇನೆ. ನನಗೆ ಪ್ರೀತಿ ಕಾಳಜಿ ತೋರಿಸಿದ್ದೀರಿ, ನಿಮ್ಮ ಬೆಂಬಲದಿಂದ ತಮಿಳು ಬಿಗ್ ಬಾಸ್ ರಿಯಾಲಿಟಿ ಶೋ ನನ್ನ ಪಾಲಿಗೆ ಬೆಸ್ಟ್ ಆಯಿತು. ಈ ಅನುಭವ ನೀಡಿದ್ದಕ್ಕೆ  ಸ್ಪರ್ಧಿಗಳಿಂದ ಹಿಡಿದು ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಅವರು ಪತ್ರ ಬರೆದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ