ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎತ್ತಂಗಡಿ
ಬೆಂಗಳೂರು: ರಾಜ್ಯ ಸರ್ಕಾರ ಉನ್ನತ ಪೊಲೀಸ್ ಅಧಿಕಾರಿಗಳನ್ನು ಸೋಮವಾರ ವರ್ಗಾವಣೆ ಮಾಡಿದ್ದು, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರನ್ನೂ ಎತ್ತಂಗಡಿ ಮಾಡಲಾಗಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸಿ.ಹೆಚ್.ಪ್ರತಾಪ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ರೆಡ್ಡಿ ಅವರು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆ ಎಸ್ ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಆಗಿ ವರ್ಗ ಮಾಡಲಾಗಿದೆ. ಆರ್.ಹಿತೇಂದ್ರ ಅವರನ್ನು ಕೆ ಎಸ್ ಆರ್ ಪಿ ಎಡಿಜಿಪಿ ಆಗಿ ನೇಮಿಸಲಾಗಿದೆ. ಎಂ. ಎನ್. ಅನುಚೇತ್ ಅವರನ್ನು ಸಿಐಡಿ ಎಸ್ ಪಿ ಯನ್ನಾಗಿ ವರ್ಗಾಯಿಸಲಾಗಿದೆ.
ಚಂದ್ರು ಕೊಲೆ ಪ್ರಕರಣದಲ್ಲಿ ಅವರು ಪಂತ್ ಅವರು ಮಾಡಿದ ಟ್ವೀಟ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈಗ ಸವಾಲುಗಳಿಂದ ಕೊಡಿರುವ ಆರೋಪಗಳನ್ನ ಎದುರಿಸುತ್ತಿರುವ ನೇಮಕಾತಿ ವಿಭಾಗಕ್ಕೆ ವರ್ಗಾವಣೆಯಾಗಿದೆ. ಸರಕಾರದ ಕೆಲ ಸಚಿವರಿಗೆ ಕಮಲ್ ಪಂತ್ ಕಾರ್ಯ ವೈಖರಿ ಬಗ್ಗೆ ಸಮಾಧಾನವಿರಲಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶ್ರೀಗುರುದತ್ತಾತ್ರೇಯ ಪೀಠದ ಹೋಮ ನಡೆಯುವ ಸ್ಥಳದಲ್ಲಿ ನಾನ್ ವೆಜ್ ಊಟ, ಭಕ್ತರಿಂದ ಆಕ್ರೋಶ
ಬುದ್ಧ ಪೂರ್ಣಿಮೆ: ನೇಪಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ
ಮಗಳನ್ನು ಸಾಕಲು 36 ವರ್ಷಗಳಿಂದ ಪುರುಷ ವೇಷ ಧರಿಸಿ ಬದುಕುತ್ತಿರುವ ಮಹಿಳೆ!
ಬಾಲಕಿಗೆ ಡಿಕ್ಕಿ ಹೊಡೆದ ಪಿಕಪ್ ಚಾಲಕನನ್ನು ಸಜೀವ ದಹನ ಮಾಡಿದ ಗ್ರಾಮಸ್ಥರು
ನಾಯಕರ ಪಟ್ಟಿ ಕೊಡುತ್ತೇವೆ, ಯಾರನ್ನು ಬೇಕಾದರೂ ಕರೆದುಕೊಂಡು ಹೋಗಿ: ಸಿಎಂ ಇಬ್ರಾಹಿಂ