ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್ ಸ್ಪರ್ಧೆ ಘೋಷಣೆ - Mahanayaka
9:40 AM Wednesday 30 - October 2024

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್ ಸ್ಪರ್ಧೆ ಘೋಷಣೆ

27/07/2024

ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಮುಂಬರುವ ಅಧ್ಯಕ್ಷೀಯ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ನವೆಂಬರ್ ನಲ್ಲಿ ತಮ್ಮ ತಳಮಟ್ಟದ ಪ್ರಚಾರವು ಗೆಲ್ಲುತ್ತದೆ ಎಂದು ವಿಶ್ವಾಸದಿಂದ ಪ್ರತಿಪಾದಿಸಿದ್ದಾರೆ.

ಹ್ಯಾರಿಸ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು ನವೆಂಬರ್ ನಲ್ಲಿ, ಅವರ ಜನ-ಚಾಲಿತ ಅಭಿಯಾನವು ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಪ್ರತಿ ಮತವನ್ನು ಗಳಿಸಲು ಶ್ರಮಿಸುವುದಾಗಿ ಅವರು ಒತ್ತಿ ಹೇಳಿದ್ದಾರೆ.

“ಇಂದು, ನಾನು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನನ್ನ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸುವ ನಮೂನೆಗಳಿಗೆ ಸಹಿ ಹಾಕಿದ್ದೇನೆ. ಪ್ರತಿ ಮತವನ್ನು ಗಳಿಸಲು ನಾನು ಶ್ರಮಿಸುತ್ತೇನೆ. ಮತ್ತು ನವೆಂಬರ್ನಲ್ಲಿ, ನಮ್ಮ ಜನ-ಶಕ್ತಿಯ ಅಭಿಯಾನವು ಗೆಲ್ಲುತ್ತದೆ” ಎಂದು ಕಮಲಾ ಹ್ಯಾರಿಸ್ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ನವೆಂಬರ್ 5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಕಣಕ್ಕಿಳಿಯಲಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ