ಉದ್ಯಮಿ ಗಂಗಾಧರನ ಕಾಮಲೀಲೆಯನ್ನು ಲವ್ ಜಿಹಾದ್ ಎಂದರು!
ಮಂಗಳೂರು: ಉದ್ಯಮಿಯನ್ನು ಮತಾಂತರ ಮಾಡಿ ಲವ್ ಜಿಹಾದ್ ಮಾಡಲಾಗಿದೆ ಎಂದು ಕಳೆದ ಕೆಲವು ದಿನಗಳಿಂದ ವ್ಯಾಪಕ ಚರ್ಚೆಗೀಡಾಗಿದ್ದ ಪ್ರಕರಣದ ಅಸಲಿಯತ್ತು ಇದೀಗ ಬಯಲಾಗಿದ್ದು, ಓರ್ವ ಉದ್ಯಮಿಯ ಕಾಮಲೀಲೆಗೆ ಲವ್ ಜಿಹಾದ್ ಬಣ್ಣ ಕಟ್ಟಿರುವುದು ಇದೀಗ ಬೆಳಕಿಗೆ ಬಂದಿದೆ.
ಬೋಳಾರ ನಿವಾಸಿ, ಮಂಗಳೂರಿನ ಉದ್ಯಮಿಯಾಗಿರುವ 62 ವರ್ಷ ವಯಸ್ಸಿನ ಬಿ.ಎಸ್.ಗಂಗಾಧರ್ ಬಹುಪತ್ನಿ ವಲ್ಲಭನಾಗಿದ್ದು, ಈತ ಈಗಾಗಲೇ 3 ಮದುವೆಯಾಗಿದ್ದಾನೆ. ತಾನು ಮುಸ್ಲಿಮ್ ಎಂದು ಹೇಳಿ ಇದೀಗ 22 ವರ್ಷ ವಯಸ್ಸಿನ ಮುಸ್ಲಿಮ್ ಮಹಿಳೆಯನ್ನು ಯಾಮಾರಿಸಿ ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕೇರಳ ಮೂಲದ ಸೈಯದ್ , ಶಬ್ಬೀರ್, ಮತ್ತು ಅಹ್ಮದ್ ಎಂಬವರು ಮುಸ್ಲಿಂ ಮಹಿಳೆಗೆ ವಂಚಿಸುವ ಉದ್ದೇಶದಿಂದ ಗಂಗಾಧರ್ ನನ್ನು ಅಬ್ದುಲ್ ಅನೀಸ್ ಎಂದು ಪರಿಚಯಿಸಿ ಡಿಸೆಂಬರ್ 21ರಂದು ವಿವಾಹ ಮಾಡಿಸಿದ್ದರು ಎಂದು ತಿಳಿದುಬಂದಿದೆ. ವಿವಾಹವಾದ ಬಳಿಕ ಆತ ಸಮುದಾಯದವನಲ್ಲ ಎಂದು ತಿಳಿದುಬಂದು ಆತನಿಂದ ದೂರವಿದ್ದಾಗ, ಆತ ದೈಹಿಕ ಹಲ್ಲೆ, ಲೈಂಗಿಕ ದೌರ್ಜನ್ಯ ನಡೆಸಿ, ಗರ್ಭಪಾತ ಮಾಡಿಸಿದ್ದಾನೆ ಎಂದು ಹೇಳಲಾಗಿದೆ.
ಪುತ್ತೂರು ಮೂಲದ ಸಂತ್ರಸ್ತ ಯುವತಿಯ ಪತಿ ಅಪಘಾತದಲ್ಲಿ ಮೃತಪಟ್ಟಿದ್ದ. ಇದೇ ಸಂದರ್ಭದಲ್ಲಿ ಗಂಗಾಧರನನ್ನು ಸೈಯದ್ , ಶಬ್ಬೀರ್, ಮತ್ತು ಅಹ್ಮದ್ ಎಂಬವರು ಪರಿಚಯಿಸಿ ಈತ ಮುಸ್ಲಿಮ್ ಎಂದು ಹೇಳಿ ವಂಚಿಸಿದ್ದಾರೆ. ಈ ಬಗ್ಗೆ ಸಂತ್ರಸ್ತ ಮುಸ್ಲಿಮ್ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಗಂಗಾಧರವೋರ್ವ ಕಾಮುಕನಾಗಿದ್ದಾನೆ. ಈಗಾಗಲೇ ಹಲವಾರು ಮದುವೆಯಾಗಿದ್ದಾನೆ. ಹಲವು ಮಹಿಳೆಯರಿಗೂ ವಂಚಿಸಿದ್ದಾನೆ ಎಂದು ಹೇಳಲಾಗಿದೆ. ಈ ಪ್ರಕರಣ ಕರಾವಳಿಯಲ್ಲಿ ಭಾರೀ ಚರ್ಚೆಯಾಗಿತ್ತು. ಇನ್ನೂ ಈ ಬಗ್ಗೆ ಹೇಳಿಕೆ ನೀಡಿದ್ದ ವಿಎಚ್ ಪಿ ಮುಖಂಡ ಶರಣ್ ಪಂಪ್ ವೇಲ್ ಮಂಗಳೂರಿನಲ್ಲಿ ಲವ್ ಜಿಹಾದ್ ನ ಇನ್ನೊಂದು ಮುಖ ಬಯಲಾಗಿದೆ. ಮುಸ್ಲಿಮ್ ಹೆಣ್ಣು ಮಕ್ಕಳನ್ನು ಛೂ ಬಿಟ್ಟು ಲವ್ ಜಿಹಾದ್ ತಂತ್ರ. 22 ವರ್ಷದ ಮುಸ್ಲಿಮ್ ಯುವತಿಯನ್ನು ಮದುವೆಯಾದ 62 ವರ್ಷದ ಉದ್ಯಮಿ ಗಂಗಾಧರ ಇಸ್ಲಾಮ್ ಗೆ ಮತಾಂತರ ಎಂದು ಹೇಳಿದ್ದರು.
ಪತ್ನಿಯ ಜನನಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ! | ಘಟನೆಯ ಹಿಂದಿದೆ ಮಹಿಳೆಯ ಕರುಣಾಜನಕ ಕಥೆ