ಬರ್ತಿದೆ ‘ಕಂಬ್ಲಿಹುಳ’: ಚಿತ್ರ ವೀಕ್ಷಿಸಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ: ಹಾಸನದ ಯುವಕ ಪುನೀತ್ ಮನವಿ

kamblihula kannada Movie
13/09/2022

ಸಿನಿಮೋತ್ಸಾಹಿಗಳ ಯುವ ತಂಡ ಸೇರಿ ತಯಾರಿಸಿರುವ ಕಂಬ್ಳಿಹುಳ ಸಿನಿಮಾ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ನೈಜ ಘಟನೆಯಾಧಾರಿತ ಸಿನಿಮಾವನ್ನು ಸಿನಿಪ್ರಿಯರು ವೀಕ್ಷಿಸಿ, ಯುವ ತಂಡವನ್ನು ಹಾರೈಸುವಂತೆ ಹಾಸನದ ಯುವಕ ಪುನೀತ್ ಅವರು ಸಿನಿಪ್ರಿಯರಿಗೆ ಮನವಿ ಮಾಡಿಕೊಂಡಿದ್ದಾರೆ.

ಕಿರುಚಿತ್ರದಿಂದ ಜರ್ನಿ ಆರಂಭಿಸಿದ್ದ ನಿರ್ದೇಶಕ ನವನ್ ಶ್ರೀನಿವಾಸ್ ಕಂಬ್ಲಿಹುಳ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಕಂಬ್ಳಿಹುಳ ಸಿನಿಮಾದ ಮೊದಲ ಹಾಡು ಈಗಾಗಲೇ ಅನಾವರಣಗೊಂಡಿದ್ದು, ಮಹದೇವ್ ಸ್ವಾಮಿ, ರವಿ ಧನ್ಯ ಸಾಹಿತ್ಯದ ಹಾಡಿಗೆ ವಿಜಯ್ ಪ್ರಕಾಶ್-ಸಂಗೀತ ರವೀಂದ್ರನಾಥ್ ಧ್ವನಿಯಾಗಿದ್ದಾರೆ. ಶಿವ ಪ್ರಸಾದ್ ಸಂಗೀತ ಹಾಡಿನಲ್ಲಿ ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಜೋಡಿ ಸಹಜ ನಟನೆ ಮೂಲಕ ಗಮನಸೆಳೆದಿದ್ದಾರೆ. ಈ ಹಾಡು ಇದೀಗ ಸಿನಿಪ್ರಿಯರ ಗಮನ ಸೆಳೆಯುತ್ತಿದೆ ಎಂದು ಪುನೀತ್ ತಿಳಿಸಿದರು.

ಮಲೆನಾಡಿ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಚಿತ್ರವಿದು. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸಾಗರ ಸುತ್ತಮುತ್ತಾ ಶೂಟಿಂಗ್ ಮಾಡಲಾಗಿದೆ. ಎರಡು ಕಾಲು ಘಂಟೆಯ ಸಿನಿಮಾದಲ್ಲಿ ಪ್ರೇಕ್ಷಕನಿಗೆ ನಗು ಅಳು, ಕಾಮಿಡಿ ಎಲ್ಲವೂ ಉಣಬಡಿಸಲಾಗಿದೆ ಎಂದು ಅವರು ತಿಳಿಸಿದರು.

ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ರೋಹಿತ್ ಕುಮಾರ್, ದೀಪಕ್ ರೈ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿದಂತೆ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ. ವಿನಯ್, ನವೀನ್, ಪುನೀತ್ ಹಾಗೂ ಗುರು ಬಂಡವಾಳ ಹೂಡಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನ ಸಿನಿಮಾಕ್ಕಿದೆ ಎಂದು ಪುನೀತ್ ಮಾಹಿತಿ ನೀಡಿದ್ದಾರೆ.

ಹೊಸಬರ ಚಿತ್ರಕ್ಕೆ ಸಿನಿಪ್ರಿಯರು ಪ್ರೋತ್ಸಾಹ ನೀಡುವ ಮೂಲಕ ಚಿತ್ರವನ್ನು ಗೆಲ್ಲಿಸಬೇಕಿದೆ. ಕನ್ನಡದ ಯುವ ಪ್ರತಿಭೆಗಳನ್ನು ಬೆಳೆಸುವ ಮೂಲಕ ಕನ್ನಡದ ಚಿತ್ರಗಳಿಗೆ ಪ್ರೋತ್ಸಾಹಿಸಬೇಕಿದೆ. ಉತ್ತಮ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಖಂಡಿತವಾಗಿಯೂ ಸಿನಿಪ್ರಿಯರು ಆಶೀರ್ವಾದಿಸುತ್ತಾರೆ ಎನ್ನುವ ವಿಶ್ವಾಸ ನಮಗಿದೆ. ಚಿತ್ರವನ್ನು ನೋಡಿ ಬೆಂಬಲಿಸಿ ಎಂದು ಹಾಸನದ ಪುನೀತ್ ಅವರು ಮನವಿ ಮಾಡಿಕೊಂಡರು.

ಯುವ ನಟ ಅಂಜನ್


ಬಡವರ ಪ್ರತಿಭೆಯಾಗಿರುವ ಯುವ ನಟ ಅಂಜನ್ ಚಿತ್ರರಂಗಕ್ಕೆ ಪಾದಾರ್ಪಣೆಗೊಂಡಿದ್ದಾರೆ. ಇವರು ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಆದರೆ, ನಟನೆಯಲ್ಲಿರುವ ಅಪಾರ ಆಸಕ್ತಿಯಿಂದಾಗಿ ಅವರು ಚಿತ್ರರಂಗವನ್ನು ಆರಿಸಿಕೊಂಡಿದ್ದಾರೆ. ತಮ್ಮ ಚಿತ್ರದ ಮೇಲೆ ಸಾಕಷ್ಟು ಕನಸು ಹೊತ್ತಿದ್ದು, ಯುವ ಪ್ರತಿಭೆಯ ಈ ಚಿತ್ರವನ್ನು ನೋಡಿ, ಅವಕಾಶ ಮಾಡಿಕೊಡುವಂತೆ ಪುನೀತ್ ಮನವಿ ಮಾಡಿದರು.

ಯುವ ನಟ ಅಂಜನ್


ಚಿಕ್ಕ ವಯಸ್ಸಿನಿಂದಲೇ ನಟನ ರಂಗದಲ್ಲಿ ಆಸಕ್ತಿ ಹೊಂದಿದ್ದ ಅಂಜನ್ ಹಾಸನದ ರಂಗಸಿರಿ ತಂಡದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಒಲಂಪಿಕ್ ಮಾರ್ಷಲ್ ಆರ್ಟ್ಸ್ ನಲ್ಲಿ ಬ್ಲಾಕ್ ಬೆಲ್ಟ್ ಪದವಿ ಪಡೆದಿದ್ದಾರೆ ಎಂದು ಪುನೀತ್ ತಿಳಿಸಿದರು.

ಹಾಸನದ ಯುವಕ ಪುನೀತ್


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version