ಕಂಗನಾ ಹೇಳಿದ್ದನ್ನು ಮುಸ್ಲಿಮ್ ವ್ಯಕ್ತಿ ಹೇಳಿದ್ದರೆ, ಮೊಣಕಾಲಿಗೆ ಗುಂಡಿಟ್ಟು ಜೈಲಿಗಟ್ಟಲಾಗುತ್ತಿತ್ತು | ಓವೈಸಿ
ನವದೆಹಲಿ:ಕಂಗನಾ ಹೇಳಿದ ಮಾತನ್ನು ಮುಸ್ಲಿಮ್ ವ್ಯಕ್ತಿ ಯಾರಾದರೂ ಹೇಳಿದಿದ್ದರೆ, ಅವರ ಮೊಣಕಾಲಿಗೆ ಗುಂಡು ಹಾರಿಸಿ ಜೈಲಿಗಟ್ಟಲಾಗುತ್ತಿತ್ತು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದರು.
ಅಲಿಘರ್ ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತಕ್ಕೆ 2014ರಲ್ಲಿ ಸ್ವಾತಂತ್ರ್ಯ ದೊರಕಿತು ಎಂಬ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಅವರು, ಇದೇ ಮಾತನ್ನು ಮುಸ್ಲಿಂ ವ್ಯಕ್ತಿ ಹೇಳಿದ್ದರೆ, ಅವರ ಮೇಲೆ ಕಪಾಳಮೋಕ್ಷ ಮಾಡಲಾಗುತ್ತಿತ್ತು. ಮೊಣಕಾಲಿಗೆ ಗುಂಡು ಹಾರಿಸಿ ಜೈಲಿಗೆ ಕಳುಹಿಸಲಾಗುತ್ತಿತ್ತು ಎಂದು ಟೀಕಿಸಿದರು.
1947 ರಲ್ಲಿ ಭಾರತದ ಸ್ವಾತಂತ್ರ್ಯವು ಸ್ವಾತಂತ್ರ್ಯವಲ್ಲ, ಅದು ಭಿಕ್ಷೆ ಎಂದು ಕಂಗನಾ ರನೌತ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಮಾತ್ರವಲ್ಲದೇ ನಮಗೆ 2014 ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಅವರು ಹೇಳಿದ್ದಾರೆ. ಇದೇ ಮಾತನ್ನು ಒಬ್ಬ ಮುಸ್ಲಿಮ್ ಆಡಿದ್ದರೆ, ಆತನಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದರು ಎಂದು ಓವೈಸಿ ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.
ಹಣೆಪಟ್ಟಿ ಕಟ್ಟಲಾಗುತ್ತದೆ’ ಎಂದು ಓವೈಸಿ ಹೇಳಿದ್ದಾರೆ. ‘ಅವಳು ರಾಣಿ ಮತ್ತು ನೀನು ರಾಜ. ಆದ್ದರಿಂದ, ನೀವು ಏನನ್ನೂ ಮಾಡುವುದಿಲ್ಲ’ ಎಂದು ಅವರು ಕಂಗನಾ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ ಕಂಗನಾಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06
ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ದಂಪತಿಯ ದಾರುಣ ಸಾವು
ಹಂಸಲೇಖ ವಿರುದ್ಧ ಮಾತನಾಡುತ್ತಿರುವವರು ನಿಜವಾದ ದಲಿತ ವಿರೋಧಿಗಳು!
ಎಚ್ಚರ…! ನೀವು ನಿದ್ದೆ ಕೆಡುತ್ತಿದ್ದೀರಾ? | ಹಾಗಿದ್ದರೆ ಈ ವಿಚಾರವನ್ನು ತಿಳಿದುಕೊಳ್ಳಲೇ ಬೇಕು!
ಸಿನಿಮಾ ಮಂದಿರದ ಹೊರಗಡೆ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಸಿದ ಶಿವರಾಜ್ ಕುಮಾರ್