“47ರ ಸ್ವಾತಂತ್ರ್ಯ ಭಿಕ್ಷೆ, ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ” | ನಟಿ ಕಂಗನಾ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ
ನವದೆಹಲಿ: ಭಾರತಕ್ಕೆ 2014ರಲ್ಲಿ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದೆ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಬಾಲಿವುಡ್ ನಟಿ ಕಂಗನಾ ನೀಡಿರುವ ಹೇಳಿಕೆ ಇದೀಗ ವ್ಯಾಪಕವಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಟಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಗನಾ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, “ಭಿಕ್ಷೆ ಬೇಡಿದವರಿಗೆ ಕ್ಷಮಾದಾನ ಸಿಕ್ಕಿದೆ. ಧೈರ್ಯದಿಂದ ಹೋರಾಡಿದ ವೀರರಿಗೆ ಸ್ವಾತಂತ್ರ್ಯ ಸಿಕ್ಕಿದೆ” ಎಂದು ವೀರ ಸಾವರ್ಕರ್ ಗೆ ಟಾಂಗ್ ನೀಡಿದೆ.
ದೇಶದ ಕಾನೂನು ಹಾಗೂ ಭಾರತದ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ಇಂತಹ ವ್ಯಕ್ತಿ ಪದ್ಮಶ್ರೀಯಂತಹ ಶ್ರೇಷ್ಠ ಪ್ರಶಸ್ತಿಗೆ ಅರ್ಹರಲ್ಲ ಎಂದು ಮಹಿಳಾ ಕಾಂಗ್ರೆಸ್ ಕೂಡ ಕಿಡಿಕಾರಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಭಾರತೀಯರು ಪ್ರಾಣ ಬಿಟ್ಟಿದ್ದಾರೆ. ಆದರೆ, ದೇಶದ ಸ್ವಾತಂತ್ರ್ಯಕ್ಕೆ ಬಲಿದಾನಕ್ಕೆ ಅಪಮಾನ ಮಾಡುವಂತಹ ಹೇಳಿಕೆಯನ್ನು ಕಂಗನಾ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟ ಎಂದರೆ, ಡಮ್ಮಿ ಕುದುರೆ ಮೇಲೆ ಕುಳಿತು ಸಿನಿಮಾ ಶೂಟಿಂಗ್ ಮಾಡಿದಷ್ಟು ಸುಲಭ ಎಂದು ಕಂಗನಾ ಅಂದು ಕೊಂಡಿದ್ದಾರೆ ಎನ್ನುವ ಟ್ರೋಲ್ ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ.
ಇನ್ನೊಂದೆಡೆ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೊಡ್ಡ ವ್ಯಕ್ತಿಗಳಿದ್ದರೂ, ನಟಿ ಕಂಗನಾಗೆ ಪದ್ಮಶ್ರೀ ನೀಡಿರುವುದಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಂಗನಾ ಅವರು ಬಿಜೆಪಿ ಪರವಾಗಿ ಬ್ಯಾಟಿಂಗ್ ಮಾಡಿರುವುದಕ್ಕೆ ಅನುಕಂಪದ ಆಧಾರದಲ್ಲಿ ಅವರಿಗೆ ಪದ್ಮಶ್ರೀ ನೀಡಲಾಗಿದೆ ಎನ್ನುವ ವಿರೋಧಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಶಾಕಿಂಗ್ ನ್ಯೂಸ್: ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿದ ಬಂಡೆಗಳು
ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ | ಹೈಕೋರ್ಟ್ ಪ್ರಶ್ನೆ
ನಿಧಿಯಾಸೆಗಾಗಿ ಬೆತ್ತಲೆ ಪೂಜೆ: ಮೌಢ್ಯ ಆಚರಣೆಯಲ್ಲಿ ತೊಡಗಿದ್ದ 6 ಮಂದಿ ಅರೆಸ್ಟ್
ಬಿಟ್ ಕಾಯಿನ್ ಹಗರಣ ಆರೋಪ ನಿರ್ಲಕ್ಷಿಸಲು ಸಿಎಂ ಬೊಮ್ಮಾಯಿಗೆ ಪ್ರಧಾನಿ ಮೋದಿ ಸಲಹೆ!
ಶೀಘ್ರದಲ್ಲೇ ಮದುವೆಯಾಗ್ತಾರಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟಿ ಕಂಗನಾ!