ಒಂದೋ ಜೈಲಿಗಟ್ಟಿ ಇಲ್ಲವೇ, ಹುಚ್ಚಾಸ್ಪತ್ರೆಗೆ ಸೇರಿಸಿ: ಕಂಗನಾ ವಿರುದ್ಧ ಸಿಡಿದೆದ್ದ ಸಿಖ್ಖರು - Mahanayaka
3:18 AM Wednesday 11 - December 2024

ಒಂದೋ ಜೈಲಿಗಟ್ಟಿ ಇಲ್ಲವೇ, ಹುಚ್ಚಾಸ್ಪತ್ರೆಗೆ ಸೇರಿಸಿ: ಕಂಗನಾ ವಿರುದ್ಧ ಸಿಡಿದೆದ್ದ ಸಿಖ್ಖರು

kangana
21/11/2021

ನವದೆಹಲಿ: ಇಂದಿರಾ ಗಾಂಧಿಯನ್ನು ವಿರೋಧಿಸುವ ಭರದಲ್ಲಿ ದೇಶದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ, ಇನ್ ಸ್ಟಾಗ್ರಾಮ್ ನಲ್ಲಿ  ಬಿಜೆಪಿ ಪರ ನಟಿ ಕಂಗನಾ ರಣಾವತ್ ಪೋಸ್ಟ್ ಹಾಕಿದ್ದು,  ವಿರುದ್ಧ ಇಂಡಿಯನ್ ಯೂಥ್ ಕಾಂಗ್ರೆಸ್ ಶನಿವಾರ ದೂರು ದಾಖಲಿಸಿದ್ದು, ದೇಶದ್ರೋಹ ಪ್ರಕರಣ ದಾಖಲಿಸಲು ಮನವಿ ಮಾಡಿದೆ.

ದೇಶದ ಸಿಖ್ ಸಮುದಾಯವನ್ನು ಖಲಿಸ್ತಾನಿಗಳು ಎನ್ನುವ ಮೂಲಕ ಪದೇ ಪದೇ ಬಿಜೆಪಿ ಪರ ನಾಯಕರು ವಿವಾದವನ್ನು ಸೃಷ್ಟಿಸಿದ್ದರು. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ರೈತರ ಹೋರಾಟಕ್ಕೆ ಮಣಿದು ಮೂರು ವಿವಾದಿತ ಕೃಷಿ ಕಾನೂನು ವಾಪಸ್ ಪಡೆಯುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಕಂಗನಾ ರಣಾವತ್  ಭಾರತೀಯ ಸಿಖ್ಖರ ವಿರುದ್ಧ ಹರಿಹಾಯ್ದಿರುವುದರ ವಿರುದ್ಧ ಸಿಖ್ಖರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಗನಾ ವಿರುದ್ಧ ಕ್ರಮಕೈಗೊಂಡು ಅವರನ್ನು ಜೈಲಿಗಟ್ಟಬೇಕು. ಇದು ಸಾಧ್ಯವಾಗದೇ ಹೋದರೆ, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ. ಇನ್ ಸ್ಟಾಗ್ರಾಮ್ ನಲ್ಲಿ ಅವರ ದ್ವೇಷಪೂರಿತ ಪೋಸ್ಟ್ ಕುರಿತಂತೆ ಸರ್ಕಾರ ಕಠಿಣ ಕ್ರಮತೆಗೆದುಕೊಳ್ಳಬೇಕು ಎಂದು ಸಿಖ್ಖರು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗಾಂಜಾ ಮಾರಾಟ ಆರೋಪ: ಅಮೆಜಾನ್ ವಿರುದ್ಧ ದೂರು ದಾಖಲು

ಮಗುವಿಗೆ ಜನ್ಮ ನೀಡಿದ ಎಸೆಸೆಲ್ಸಿ ವಿದ್ಯಾರ್ಥಿನಿ | ಆರೋಪಿ ಅರೆಸ್ಟ್

ಅಪಾಯದ ಮಟ್ಟ ಮೀರಿ ಉಕ್ಕಿ ಹರಿದ ಪಂಬಾ ನದಿ: ಶಬರಿಮಲೆ ಯಾತ್ರೆ ನಿಷೇಧ

ಪ್ರವಾಹಕ್ಕೆ ನಲುಗಿದ ಆಂಧ್ರಪ್ರದೇಶ: 17 ಮಂದಿ ಸಾವು, 100ಕ್ಕೂ ಅಧಿಕ ಮಂದಿ ನಾಪತ್ತೆ

ವಿವಾದಿತ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದರೂ ಆಂದೋಲನ ಮುಂದುವರಿಸಿದ ರೈತರು: ಕಾರಣ ಏನು ಗೊತ್ತಾ?

ಬಿಗ್ ನ್ಯೂಸ್: ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಮೋದಿ ಸರ್ಕಾರ!

ಇತ್ತೀಚಿನ ಸುದ್ದಿ