ಮಂಗಳೂರು: ಧಾರ್ಮಿಕ ಕೇಂದ್ರಗಳ ಕಾಣಿಕೆ ಡಬ್ಬಿಗಳಿಗೆ ಕಾಂಡೋಮ್ ಹಾಕುತ್ತಿದ್ದ ವ್ಯಕ್ತಿ ಅರೆಸ್ಟ್
ಮಂಗಳೂರು: ಮಂಗಳೂರಿನಲ್ಲಿ ಧಾರ್ಮಿಕ ಕೇಂದ್ರಗಳ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಬಿತ್ತಿ ಪತ್ರಗಳನ್ನು ಹಾಕಿ ಸಮುದಾಯಗಳ ನಡುವೆ ಅನುಮಾನಗಳನ್ನು ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೋಟೆಕಾರು ಕೊಂಡಾಣ ನಿವಾಸಿ, ಮೂಲತಃ ಹುಬ್ಬಳ್ಳಿ ನಿವಾಸಿ 62 ವರ್ಷ ವಯಸ್ಸಿನ ದೇವದಾಸ್ ದೇಸಾಯಿ ಬಂಧಿತ ಆರೋಪಿಯಾಗಿದ್ದು, ಡಿಸೆಂಬರ್ 28ರಂದು ಕಾಂಡೋಮ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಲಾಗಿತ್ತು. ಈ ವೇಳೆ ಈತ 18 ಕೃತ್ಯಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಬಂಧಿತ ಆರೋಪಿ ದೇವದಾಸ್ ದೇಸಾಯಿ ಹುಬ್ಬಳ್ಳಿ ಮೂಲದ ವ್ಯಕ್ತಿಯಾಗಿದ್ದು, ಕಳೆದ 24 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ನಂದಿಗುಡ್ಡೆಯಲ್ಲಿರುವ ಕೊರಗಜ್ಜ ದೈವಸ್ಥಾನದ ಕಟ್ಟೆಯ ಮೇಲೆ ಡಿಸೆಂಬರ್ 28ರಂದು ಕಾಂಡೋಮ್ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ದೇವದಾಸ್ ನನ್ನು ಬಂಧಿಸಿದ್ದು, ಈ ವೇಳೆ ಈತನ ಇತರ ಕೃತ್ಯಗಳು ಬೆಳಕಿಗೆ ಬಂದಿದೆ.
ಈತ ಧಾರ್ಮಿಕ ಕೇಂದ್ರಗಳ ಕಾಣಿಕೆ ಡಬ್ಬಿಗಳಲ್ಲಿ ಅವಹೇಳನಾಕಾರಿ ಬಿತ್ತಿ ಪತ್ರ, ಕಾಂಡೊಮ್ ಗಳನ್ನು ಹಾಕುವ ಮೂಲಕ ಸಮಾಜದಲ್ಲಿ ಅನಗತ್ಯ ಸಂಶಯಗಳು ಉಂಟಾಗುವಂತೆ ಮಾಡುತ್ತಿದ್ದು, ಈತನ ಕೃತ್ಯದಿಂದ ಭಿನ್ನ ಸಮುದಾಯಗಳ ನಡುವೆ ಅನುಮಾನಗಳು ಉಂಟಾಗುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಇದೀಗ ಮಂಗಳೂರು ಪೊಲೀಸರ ಚಾಣಕ್ಷತನದಿಂದಾಗಿ ಆರೋಪಿಯು ಬಲೆಗೆ ಬಿದ್ದಿದ್ದು, ಸಮಾಜದಲ್ಲಿ ಮೂಡಿದ್ದ ಅನುಮಾನ, ಅಸಹನೆಗೆ ತೆರೆ ಬಿದ್ದಂತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಲೈನ್ ಮ್ಯಾನ್!
“ಡಿಸೆಂಬರ್ 31ರಂದು ಕರ್ನಾಟಕ ಬಂದ್ ಫಿಕ್ಸ್, ಬದಲಾವಣೆಯ ಮಾತೇ ಇಲ್ಲ”
ಕೊರಗ ಜನಾಂಗದ ಮೇಲೆ ಲಾಠಿ ಚಾರ್ಜ್ ನಡೆಸಿ ದೌರ್ಜನ್ಯ: ಕೋಟ ಠಾಣೆ ಪಿಎಸ್ ಐ ಸಂತೋಷ್ ಬಿ.ಪಿ. ಸಸ್ಪೆಂಡ್
ಹೊತ್ತಿ ಉರಿದ ಮನೆ: ಒಂದೇ ಕುಟುಂಬದ ಐವರು ಮಕ್ಕಳ ದಾರುಣ ಸಾವು
ಪಟಾಕಿಯ ಕಿಡಿ ಸೋಕಿ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ದೇವರ ರಥ!
ಬಿಜೆಪಿಗೆ ವೋಟು ಹಾಕಿದರೆ 50 ರೂಪಾಯಿಗೆ ಮದ್ಯ ಕೊಡುತ್ತೇವೆ | ಬಿಜೆಪಿ ನಾಯಕ ಹೇಳಿಕೆ