ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಬಜರಂಗದಳ, ವಿಎಚ್ ಪಿ ಸಂಚಾಲಕನ ಬಂಧನ
08/03/2021
ಕೊಣಾಜೆ: ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು ಹಾಗೂ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಸಂಚಾಲಕನನನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು- ಉಳ್ಳಾಲ ವ್ಯಾಪ್ತಿಯ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು ನಡೆಸಲಾಗಿತ್ತು. ಇಲ್ಲಿನ ಮೊಂಟೆ ಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಪ್ರಖಂಡ ತಾರನಾಥ್ ಮೋಹನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ ಸಿಸಿ ಟಿವಿ ದೃಶ್ಯಗಳಿಂದ ತಾರನಾಥ್ ಮೋಹನ್ ನ ಕೃತ್ಯ ಬಯಲಾಗಿದೆ. ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.