ಮರಳು ಮಾಫಿಯಾಕ್ಕೆ ಅಕ್ರಮಕ್ಕೆ ನೆರವು: ಕಂಕನಾಡಿ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು - Mahanayaka

ಮರಳು ಮಾಫಿಯಾಕ್ಕೆ ಅಕ್ರಮಕ್ಕೆ ನೆರವು: ಕಂಕನಾಡಿ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು

suspend
19/01/2024

ಮಂಗಳೂರು: ಮರಳು ಮಾಫಿಯಾಕ್ಕೆ ಅಕ್ರಮದಲ್ಲಿ ನೆರವು ನೀಡಿದ ಆರೋಪದ ಮೇಲೆ ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಅಮಾನತು ಮಾಡಲಾಗಿದೆ.

ಅಕ್ರಮ ಮರಳು ದಂಧೆ ವಿರುದ್ಧ ಕ್ರಮಕೈಗೊಳ್ಳಲು ಮೇಲಧಿಕಾರಿಗಳ ಸೂಚನೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಎಸಿಪಿ ಧನ್ಯ ನಾಯಕ್ ವರದಿ ನೀಡಿದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್, ಇನ್ಸ್ಪೆಕ್ಟರ್ ಎಚ್ಎಸ್ ಭಜಂತ್ರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಜೆಪ್ಪಿನಮೊಗರು ಕಡೆಕಾರು ಎಂಬಲ್ಲಿ ಅಕ್ರಮ ಮರಳು ತೆಗೆಯುವ ಸ್ಥಳದ ಮೇಲೆ ದಾಳಿ ನಡೆಸುವಂತೆ ಉನ್ನತ ಅಧಿಕಾರಿಗಳ ಸೂಚನೆಯನ್ನು ಭಜಂತ್ರಿ ನಿರ್ಲಕ್ಷಿಸಿದ್ದಾರೆ ಎಂದು ವರದಿಯಾಗಿತ್ತು.

ದೂರುಗಳೊಂದಿಗೆ ಠಾಣೆಗೆ ಭೇಟಿ ನೀಡುವ ಜನರೊಂದಿಗೆ ಇನ್ಸ್ ಪೆಕ್ಟರ್ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ