ಬ್ರೇಕಿಂಗ್ ನ್ಯೂಸ್: ಹಿರಿಯ ನಟ ಸತ್ಯಜಿತ್ ಇನ್ನಿಲ್ಲ - Mahanayaka
11:25 PM Tuesday 4 - February 2025

ಬ್ರೇಕಿಂಗ್ ನ್ಯೂಸ್: ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

sathyajith
10/10/2021

ಬೆಂಗಳೂರು: ಅನಾರೋಗ್ಯದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ಸತ್ಯಜಿತ್ ಇಂದು ತಡರಾತ್ರಿ ನಿಧನರಾಗಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆಯಿಂದ ಬೌರಿಂಗ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅದ್ಭುತ, ಖಳನಟ, ಹಾಸ್ಯನಟ, ಅತ್ಯುತ್ತಮ ಪೋಷಕ ನಟರಾಗಿದ್ದ ಸತ್ಯಜಿತ್, ಎಂತಹ ಪಾತ್ರಗಳಿಗೂ ಜೀವ ತುಂಬುತ್ತಿದ್ದರು.  ತಮ್ಮ ಪ್ರಬುದ್ಧ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಅವರು ಗಳಿಸಿದ್ದರು.

ತಮ್ಮ 72ನೇ ವಯಸ್ಸಿನವರೆಗೆ ಜೀವನ ಪ್ರಯಾಣ ನಡೆಸಿದ ಅವರು ನಿನ್ನೆ ತಡರಾತ್ರಿ ತಮ್ಮ ಜೀವನ ಪ್ರಯಾಣವನ್ನು ಮುಗಿಸಿದ್ದಾರೆ. ಕೆಲವು ವರ್ಷಗಳಿಂದ ಹಲವಾರು ಅನಾರೋಗ್ಯ ಸಮಸ್ಯೆಗಳು ಬಂದರೂ ಕೂಡ ಅದು ಯಾವುದನ್ನೂ ಲೆಕ್ಕಿಸದೇ, ಎದೆಗುಂದದೇ ಸತ್ಯಜಿತ್ ಮತ್ತೆ ಅಭಿನಯಿಸಿದ್ದರು.  ಗ್ಯಾಂಗ್ರಿನ್ ನಿಂದಾಗಿ ಅವರ ಕಾಲನ್ನು ಕತ್ತರಿಸುವಂತಹ ಸಂದರ್ಭ ಬಂದಾಗಲೂ ಅವರು ಎದೆಗುಂದಿರಲಿಲ್ಲ.

ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತ್ಯಜಿತ್ ಅವರು ನಿನ್ನೆ ತಡರಾತ್ರಿ 2 ಗಂಟೆಯ ವೇಳೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.  ಸುಮಾರು 650ಕ್ಕೂ ಅಧಿಕ  ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರಗಳಲ್ಲಿ ನಟಿಸಿದ್ದ ಸತ್ಯಜಿತ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಮಾತ್ರವಲ್ಲ, ಅವರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ರೈಲಿನೊಳಗೆ ಪತಿಯ ಕಣ್ಣೆದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಡಕಾಯಿತರು

ಬಂಟ್ವಾಳ: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳ ಅರೆಸ್ಟ್

ಪೊಲೀಸರ ದುಷ್ಕೃತ್ಯದಿಂದ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಸಂತ್ರಸ್ತೆ

ಮಗನ ಅಂತ್ಯಸಂಸ್ಕಾರ ಮುಗಿದು ಕೆಲವೇ ಕ್ಷಣಗಳಲ್ಲಿ ತಾಯಿ ಹೃದಯಾಘಾತದಿಂದ ಸಾವು!

ಆರ್ಯನ್ ಖಾನ್ ಭಾಗವಹಿಸಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದ ಬಿಜೆಪಿ ನಾಯಕನ ಭಾವನನ್ನು ಬಿಡುಗಡೆ ಮಾಡಲಾಗಿದೆ | ಎನ್‌ ಸಿಪಿ ನಾಯಕ ಗಂಭೀರ ಆರೋಪ

 

ಇತ್ತೀಚಿನ ಸುದ್ದಿ