ಕನ್ನಡ ಅರ್ಥ ಆಗುತ್ತೆ, ಕನ್ನಡದಲ್ಲೇ ಪ್ರಶ್ನೆ ಕೇಳಿ ಎಂದ ತಮಿಳುನಟ ವಿಜಯ್ ಸೇತುಪತಿ! - Mahanayaka
2:30 PM Wednesday 11 - December 2024

ಕನ್ನಡ ಅರ್ಥ ಆಗುತ್ತೆ, ಕನ್ನಡದಲ್ಲೇ ಪ್ರಶ್ನೆ ಕೇಳಿ ಎಂದ ತಮಿಳುನಟ ವಿಜಯ್ ಸೇತುಪತಿ!

vijay setupati
13/07/2021

ಬೆಂಗಳೂರು: ತಮಿಳು ನಟ ವಿಜಯ್ ಸೇತುಪತಿ ಅವರು ಇಂದು ರಾಮನಗರಕ್ಕೆ ಆಗಮಿಸಿದ್ದು, ಈ ವೇಳೆ  ಕನ್ನಡ ಅಭಿಮಾನವನ್ನು ಸೇತುಪತಿ ತೋರಿಸಿದ್ದು, ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ತಮಿಳಿನಲ್ಲಿ ಆರಂಭವಾಗುತ್ತಿರುವ ಮಾಸ್ಟರ್ ಶೆಫ್ ಕಾರ್ಯಕ್ರಮವನ್ನು ಉದ್ಘಾಟಿಸಲು ವಿಜಯ್ ಸೇತುಪತಿ ರಾಮನಗರದ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ವಿಜಯ್ ಸೇತುಪತಿ ಅವರ ಹೇಳಿಕೆ ಪಡೆಯಲು ಮುಂದಾಗಿದ್ದಾರೆ.

ಮಾಧ್ಯಮಗಳು ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಲು ಮುಂದಾದಾಗ ವಿಜಯ್ ಸೇತುಪತಿ ಅವರು, ನನಗೆ ಕನ್ನಡ ಅರ್ಥವಾಗುತ್ತದೆ. ಕನ್ನಡಲ್ಲೇ ಪ್ರಶ್ನೆ ಕೇಳಿ ಎಂದು ಹೇಳಿದ್ದು, ಈ ಮೂಲಕ ಕನ್ನಡಿಗೆ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇನ್ನೂ ತನಗೆ ಕರ್ನಾಟಕದಲ್ಲಿ ಮಡಿಕೇರಿಯ ಕೂರ್ಗ್ ತುಂಬಾ ಇಷ್ಟ. ಬೆಂಗಳೂರು ಹಾಗೂ ಮೈಸೂರಿಗೆ ಭೇಟಿ ನೀಡಿದ್ದೇನೆ. ಅರಮನೆ ನೋಡಿದ್ದೇನೆ. ತುಂಬಾ ಸುಂದರವಾಗಿದೆ ಎಂದು ವಿಜಯ್ ಸೇತುಪತಿ ಹೇಳಿದರು.

ತಮ್ಮ ನಟನೆಯ ಡಬ್ಬಿಂಗ್ ಸಿನಿಮಾದ ಕನ್ನಡ ಡೈಲಾಗ್ ವೊಂದನ್ನು ಹೇಳುವ ಮೂಲಕ ವಿಜಯ್ ಸೇತುಪತಿ ಜನರನ್ನು ಇದೇ ಸಂದರ್ಭದಲ್ಲಿ ರಂಜಿಸಿದರು. ಇನ್ನೂ ನಟ ಕಿಚ್ಚ ಸುದೀಪ್ ಅವರ ನಟನೆಯ ಬಗ್ಗೆಯೂ ಅವರು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸುದ್ದಿಗಳು:

ದಕ್ಷಿಣ ಭಾರತದ ಈ ಮೂರು ಚಿತ್ರಗಳ ಮೇಲೆ ಹಿಂದಿವಾಲಗಳ ಕಣ್ಣು | ಹಿಂದಿ ನೆಲದಲ್ಲಿ ಮಾಸ್ಟರ್ ವಿಜಯ್, ಕೆಜಿಎಫ್, ವಲಿಮೈ ಆಟ

ಗಂಭೀರ ಸ್ಥಿತಿಯಲ್ಲಿರುವ ಹಾಸ್ಯನಟ ತವಾಸಿಗೆ ನೆರವಾದ ವಿಜಯ್ ಸೇತುಪತಿ, ಶಿವಕಾರ್ತಿಕೇಯನ್

ಇತ್ತೀಚಿನ ಸುದ್ದಿ