ಕನ್ನಡ ಬಾವುಟದ ಬಣ್ಣದಲ್ಲಿ ಒಳ ಉಡುಪು ತಯಾರಿ | ಅಮೆಜಾನ್ ವಿರುದ್ಧ ಆಕ್ರೋಶ

amazon
05/06/2021

ಬೆಂಗಳೂರು: ಗೂಗಲ್ ನಿಂದ ಕನ್ನಡಕ್ಕೆ ಅಪಮಾನವಾಗಿದೆ ಎನ್ನುವ ಕನ್ನಡಿಗರ ಆಕ್ರೋಶ ಆರುವ ಮುನ್ನವೇ ಮತ್ತೊಂದು ಘಟನೆಯಲ್ಲಿ ಕನ್ನಡಕ್ಕೆ ಅಪಮಾನವಾಗಿರುವ ಘಟನೆ ವರದಿಯಾಗಿದೆ.

ಅಮೆಜಾನ್ ನಿಂದ ಕನ್ನಡಕ್ಕೆ ಅಪಮಾನವಾಗಿದೆ ಎನ್ನುವ ಆಕ್ರೋಶಗಳು ಇದೀಗ ಕೇಳಿ ಬಂದಿದ್ದು, ಅಮೆಜಾನ್ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಬಾವುಟದ ಬಣ್ಣದಲ್ಲಿ ಮಹಿಳೆಯರ ಒಳ ಉಡುಪು ತಯಾರಿಸಿ ಅದರ ಮೇಲೆ ಕನ್ನಡ ಧ್ವಜ ಲಾಂಛನ, ಭಾರತದ ಅಶೋಕ ಚಕ್ರ, ಬಳಕೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಇನ್ನೂ ಈ ಘಟನೆ ಕನ್ನಡಿಗರಿಗೆ ನೋವುಂಟು ಮಾಡಿದೆ. ಅಮೆಜಾನ್ ಕೂಡಲೇ ರಾಜ್ಯದ ಕ್ಷಮೆ ಯಾಚಿಸಬೇಕು ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮುಖ್ಯಮಂತ್ರಿಗಳು, ಗೃಹ ಸಚಿವರು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ

Exit mobile version