ಕನ್ನಡ ಬಿಗ್ ಬಾಸ್ ನಲ್ಲಿ ಮೊದಲ ದಿನವೇ ಸ್ಪರ್ಧಿಗಳ ನಡುವೆ ಕಾಳಗ!

kannada bigg boss show
23/06/2021

ಕೊರೊನಾದಿಂದ ಅರ್ಧದಲ್ಲಿಯೇ ನಿಂತು ಹೋಗಿದ್ದ ಬಿಗ್ ಬಾಸ್ ಇದೀಗ ಮತ್ತೆ ಆರಂಭವಾಗಿದೆ. ಆರಂಭದಲ್ಲಿಯೇ ಮಹಿಳಾ ಸ್ಪರ್ಧಿಗಳಿಬ್ಬರ ನಡುವೆ ಬಿಗ್ ಫೈಟ್ ನಡೆದಿದೆ.

ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗಗೆ ಕಿಚ್ಚ ಸುದೀಪ್ ಅವರು ಒಂದು ಟಾಸ್ಕ್ ನೀಡಿದ್ದಾರೆ. ಯಾರು ಮೊದಲು ಹಣೆಗೆ ಬಿಂದಿ ಇಡುತ್ತಾರೋ ಅವರು ಈ ಟಾಸ್ಕ್ ನ ವಿನ್ನರ್ ಎಂದು ಹೇಳಿ ಕಿಚ್ಚ ಸುದೀಪ್ ತೆರಳಿದ್ದರು.

ಇತ್ತ ಟಾಸ್ಕ್ ಆರಂಭವಾಗುತ್ತಿದ್ದಂತೆ ದಿವ್ಯಾ-ದಿವ್ಯಾ ನಡುವೆ ಕಾಳಗವೇ ನಡೆದು ಹೋಯಿತು.  ಲಿವಿಂಗ್ ಏರಿಯಾದಲ್ಲಿಯೇ ಇಬ್ಬರ ನಡುವೆ ತೀವ್ರ ಕದನದ ಬಳಿಕ ಕೊನೆಗೆ ದಿವ್ಯಾ ಸುರೇಶ್ ಗೆದ್ದಿದ್ದು, ದಿವ್ಯಾ ಉರುಡುಗ ಸೋತಿದ್ದಾರೆ.

ಬಿಗ್ ಬಾಸ್ ಸ್ಪರ್ಧೆ ಎಂದರೆ ಹೀಗೇನೆ. ಏನಾದರೂ ಒಂದು ವಿವಾದಗಳು ನಡೆಯುತ್ತಲೇ ಇರುತ್ತದೆ. ಕೆಲವರು ಇದು ಸುಳ್ಳು, ಸ್ಕ್ರಿಪ್ಟ್ ಎಂಬೆಲ್ಲ ಅಭಿಪ್ರಾಯ ಹೊಂದಿದ್ದರೆ, ಇನ್ನು ಕೆಲವರು ಇದನ್ನು ನಂಬುತ್ತಿದ್ದಾರೆ. ಆರಂಭದಲ್ಲಿ ಬಿಗ್ ಬಾಸ್ ಸ್ಪರ್ಧೆಗೆ ಇದ್ದ ವೀಕ್ಷಕರು ಈಗಿಲ್ಲ ಎಂದು ಕೂಡ ಹೇಳುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version