ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ನಿಧನ - Mahanayaka
12:24 PM Wednesday 5 - February 2025

ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ನಿಧನ

jayanti
26/07/2021

ಬೆಂಗಳೂರು: ಕನ್ನಡದ ಹಿರಿಯ ನಟಿ ಜಯಂತಿ ಅವರು ಸೋಮವಾರು ನಸುಕಿನ ಜಾವ ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದು, ಅವರಿಗೆ 76 ವರ್ಷ ವಯಸ್ಸಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಜಯಂತಿ ಇಂದು ತಮ್ಮ 76 ವರ್ಷದ ಬದುಕಿಗೆ ವಿದಾಯ ಹೇಳಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದ ಜಯಂತಿ ಅವರು, ಡಾ.ರಾಜ್ ಕುಮಾರ್ ಅವರ ಜೊತೆಗೆ 45 ಚಿತ್ರಗಳಲ್ಲಿ ನಟಿಸಿದ್ದರು.

ಕನ್ನಡದ 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1950ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ನಟಿ ಜಯಂತಿಯವರ ಮೂಲ ಹೆಸರು ಕಮಲ ಕುಮಾರಿ ಎಂದಾಗಿತ್ತು. ಚಿತ್ರರಂಗಕ್ಕೆ ಬಂದ ಬಳಿಕ ಕಮಲ ಅವರು ಜಯಂತಿ ಎಂದು ಗುರುತಿಸಲ್ಪಟ್ಟರು. ನಟಿ ಜಯಂತಿ, 6 ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. 1960 ರಿಂದ 1980ರ ದಶಕದವರೆಗೂ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದರು.

ಇನ್ನಷ್ಟು ಸುದ್ದಿಗಳು…

ಬೆಟ್ಟದಿಂದ ಉರುಳಿದ ಬೃಹತ್ ಬಂಡೆಗಳು: 9 ಮಂದಿ ಸಾವು | ಭಯಾನಕ ವಿಡಿಯೋ ವೈರಲ್

ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ

ಸಂಜೆಯ ಸಂದೇಶ ಬರಲಿಲ್ಲ! | ಆಟ ಇನ್ನೂ ಮುಗಿದಿಲ್ಲ, ನಾಳೆಗೆ ಶಿಫ್ಟ್ ಆಗುತ್ತಾ ಸಿಎಂ ಬದಲಾವಣೆ ಹೈಡ್ರಾಮಾ?

ಐಷಾರಾಮಿ ಮದುವೆಗೆ ಬಂದ ಪೊಲೀಸರು ಮದುವೆಯನ್ನು ನಿಲ್ಲಿಸಿದರು!

ಇತ್ತೀಚಿನ ಸುದ್ದಿ