ಕನ್ನಡ ಧ್ವಜಕ್ಕೆ ಬೆಂಕಿ: ಕನ್ನಡಿಗರ ಘನತೆ ಎತ್ತಿಹಿಡಿಯ ಬೇಕಾದವರೇ ಏನೂ ನಡೆದಿಲ್ಲ ಎಂಬಂತಿದ್ದಾರೆ | ಯುವ ನಾಯಕ ಸಚಿನ್ ಸರಗೂರು
ಬೆಳಗಾವಿ: ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು ಎನ್ನುವಂತಹದ್ದು ಕೇವಲ ಬಾಯಿ ಮಾತಿನಲ್ಲಿಯೇ ಉಳಿದುಕೊಂಡಿದ್ದು, ಪರ ಭಾಷೆಗಳಿಗೆ ತಲೆ ತಗ್ಗಿಸಿ ನಿಂತ ಪರಿಣಾಮವೋ ಏನೋ ಇಂದು, ಕನ್ನಡ ವೀರ ನಾಯಕರ ಮೂರ್ತಿಯನ್ನು ಭಗ್ನಗೊಳಿಸುವುದು, ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚುವಂತಹ ಘಟನೆಗಳು ನಡೆಯುತ್ತಿವೆ. ಆದರೆ, ಕರ್ನಾಟಕದ ಘನತೆಯನ್ನು ಎತ್ತಿ ಹಿಡಿಯಬೇಕಾಗಿದ್ದ ರಾಜಕಾರಣಿಗಳು, ಕನ್ನಡ ಸಾಹಿತ್ಯ ಪರಿಷತ್ ನ ಮೇಧಾವಿಗಳು ಏನೂ ನಡೆದೇ ಇಲ್ಲ ಎಂಬಂತೆ ಓಡಾಡುತ್ತಿರುವುದು ನಿಜಕ್ಕೂ ದುರಂತ ಎಂದು ಹಾಸನದ ಯುವ ನಾಯಕ ಸಚಿನ್ ಸರಗೂರು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ಕನ್ನಡಿಗರ ಆಸ್ಮಿತೆಗೆ ಅವಮಾನ ಮಾಡಲಾಗಿದ್ದರೆ, ಇನ್ನೊಂದೆಡೆ ಬೆಳಗಾವಿ ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಶುಕ್ರವಾರ ತಡರಾತ್ರಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಕಿಡಿಗೇಡಿಗಳು ಹಾನಿಗೊಳಿಸಿ ದುಷ್ಕೃತ್ಯ ಮೆರೆದಿದ್ದಾರೆ. ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ವಿಕೃತಿ ಮೆರೆದಿದ್ದಾರೆ. ಆದರೆ, ಈ ಬಗ್ಗೆ ರಾಜಕೀಯ ನಾಯಕರು ಒಕ್ಕೊರಳಿನಿಂದ ಕ್ರಮಕ್ಕೆ ಆಗ್ರಹಿಸುವುದು ಬಿಟ್ಟು ಕಾಟಾಚಾರಕ್ಕೆ ಹೇಳಿಕೆ ಕೊಡುವಂತೆ ಕಾಣುತ್ತಿದೆ ಎಂದರು.
ಕನ್ನಡ ಬಾವುಟ ಸುಟ್ಟ ಪ್ರಕರಣವಾಗಲಿ, ರಾಯಣ್ಣನ ಪ್ರತಿಮೆಗೆ ಹಾನಿ ನಡೆಸಿದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಮೌನವಾಗಿದೆ. ಕನ್ನಡ ಬಗ್ಗೆ ನೂರಾರು ಕಾರ್ಯಕ್ರಮಗಳನ್ನು ನಡೆಸುವ ಕನ್ನಡ ಸಾಹಿತ್ಯ ಪರಿಷತ್ ಇಷ್ಟೊಂದು ಗಂಭೀರ ಘಟನೆಗಳು ನಡೆದಾಗ ಯಾಕೆ ಅದನ್ನು ಪ್ರಶ್ನಿಸಲು ಮುಂದಾಗುತ್ತಿಲ್ಲ. ಹಾಸನ ಕನ್ನಡ ಸಾಹಿತ್ಯ ಪರಿಷತ್ ಕೂಡ ಮೌನವಾಗಿದೆ. ಜನರು ನಿಮ್ಮನ್ನು ಗಮನಿಸುತ್ತಿದ್ದಾರೆ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಲೇ ಬೇಕಿದೆ. ಇದು ಕೇವಲ ಕನ್ನಡ ಬಾವುಟಕ್ಕೆ ಆಗಿರುವ ಅವಮಾನವಲ್ಲ, ಕನ್ನಡಿಗರ ಸ್ವಾಭಿಮಾನಕ್ಕೆ ಆಗಿರುವ ಅವಮಾನ. ಇದು ಗೊತ್ತಿದ್ದರೂ, ಗೊತ್ತಿಲ್ಲದಂತಿರುವ ಪ್ರತಿಯೊಬ್ಬರನ್ನು ಕನ್ನಡಿಗರು ಪ್ರಶ್ನೆ ಮಾಡುತ್ತೇವೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಎಲ್ಲಾ ಭಾಷೆಗಳಿಗೂ ಗೌರವ ನೀಡುತ್ತೇವೆ. ಎಲ್ಲ ಭಾಷಿಗರನ್ನೂ ಪ್ರೀತಿಸುತ್ತೇವೆ. ಕಲೆ ಸಂಸ್ಕೃತಿ ವಿಚಾರಕ್ಕೆ ಬಂದಾಗ ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ. ಹಾಗಂತ ನಮ್ಮ ತನವನ್ನು ಎಂದಿಗೂ ಕನ್ನಡ ನೆಲ ಬಿಟ್ಟುಕೊಟ್ಟಿಲ್ಲ. ಹಾಗೆಯೇ ಇಂದು ರಾಜಕಾರಣಿಗಳು, ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರುಗಳು ನಿಮ್ಮ ತನವನ್ನು ತೋರಿಸಬೇಕಿದೆ. ಈ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ, ಅವರಿಗೆ ಕನ್ನಡ ನೆಲದ ಕಾನೂನಿನ ರುಚಿ ತೋರಿಸಬೇಕು ಎಂದು ಸಚಿನ್ ಸರಗೂರು ಒತ್ತಾಯಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾಷ್ಟ್ರಭಕ್ತರ ಪ್ರತಿಮೆ ಧ್ವಂಸ; ಪುಂಡರ ವಿರುದ್ಧ ಕಠಿಣ ಕ್ರಮ: ಸಿಎಂ ಬೊಮ್ಮಾಯಿ
ಕ್ರಿಯೆಗೆ ಪ್ರತಿಕ್ರಿಯೆ ಎಂಬ ಮೊಂಡುವಾದ ಮಂಡಿಸಬೇಡಿ, ಕಾನೂನು ಕ್ರಮಕೈಗೊಳ್ಳಿ: ಸಿಎಂಗೆ ಸಿದ್ದರಾಮಯ್ಯ ಮನವಿ
ಭಿಕ್ಷಾಟನೆಗೆ ಬಳಕೆಯಾಗುತ್ತಿದ್ದ 28 ಮಕ್ಕಳ ರಕ್ಷಣೆ: ಕೋಟಾ ಶ್ರೀನಿವಾಸ್ ಪೂಜಾರಿ
ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು: ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ ಬೈದಾಡಿಕೊಳ್ಳುತ್ತಿರುವ ವಿಡಿಯೋ ಬಗ್ಗೆ ಸಿಎಂ ಇಬ್ರಾಹಿಂ ಹೇಳಿದ್ದೇನು ಗೊತ್ತಾ?
“ರೇಪ್ ತಡೆಯಲು ಆಗದಿದ್ದರೆ, ಮಲಗಿ ಎಂಜಾಯ್ ಮಾಡಬೇಕು” | ತನ್ನ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ರಮೇಶ್ ಕುಮಾರ್