‘ಸಮವಸ್ತ್ರ’ ಉಟ್ಟ ದಿನ ಪತ್ರಿಕೆಗಳು: ಒಂದೇ ರೀತಿಯ ಸುದ್ದಿ, ಒಂದೇ ರೀತಿಯ ಡಿಸೈನ್
ಬೆಂಗಳೂರು: ಕರ್ನಾಟಕದ ನಾಲ್ಕು ಪ್ರಮುಖ ದಿನ ಪತ್ರಿಕೆಗಳ ಮುಖಪುಟಗಳನ್ನು ನೋಡಿ ಇಂದು ಸ್ವತಃ ಓದುಗರು ಶಾಕ್ ಗೊಳಗಾಗಿದ್ದಾರೆ. ಒಂದೇ ರೀತಿಯ ಪುಟ ವಿನ್ಯಾಸ, ಒಂದೇ ರೀತಿಯ ಸುದ್ದಿಗಳನ್ನು ಕಂಡು ಜನರು ಗೊಂದಲಕ್ಕೀಡಾಗಿದ್ದಾರೆ.
ಪತ್ರಿಕೆಗಳೆಲ್ಲವೂ ಸಮವಸ್ತ್ರ ಧರಿಸಿದಂತೆ ಒಂದೇ ರೀತಿಯಲ್ಲಿ ಕಂಡು ಬಂದಿರುವುದು ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿದ್ದು, ಪತ್ರಿಕಾ ಧರ್ಮ ಎಲ್ಲಿ ಹೋಯ್ತು? ಅನ್ನೋ ಪ್ರಶ್ನೆಗಳಿಗೆ ಕಾರಣವಾಗಿದೆ.
ಜನರು ಸುದ್ದಿಗಳನ್ನು ತಿಳಿಯಲು ಕಷ್ಟಪಟ್ಟು ದುಡಿದ ಹಣದಿಂದ ದಿನ ಪತ್ರಿಕೆಗಳನ್ನು ಖರೀದಿಸುತ್ತಾರೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳು ವಿಶ್ವಾಸಾರ್ಹವಾಗಿದೆ ಎಂದು ನಂಬುತ್ತಾರೆ. ಆದರೆ, ದಿನ ಪತ್ರಿಕೆಗಳು ಜಾಹೀರಾತಿನಂತೆ ಸುದ್ದಿಗಳನ್ನು ಪ್ರಕಟಿಸಿದರೆ, ಹಣಕೊಟ್ಟು ಖರೀದಿರುವ ಓದುಗನಿಗೆ ಮೋಸ ಮಾಡಿದಂತಲ್ಲವೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ದಿನ ಪತ್ರಿಕೆಗಳ ‘ಸಮವಸ್ತ್ರ’ ರೀತಿಯ ಸುದ್ದಿಯ ಕುರಿತು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದ ಅಭಿಪ್ರಾಯ ಏನಂದ್ರೆ, ಇಂದು ನಾಲ್ಕು ದಿನ ಪತ್ರಿಕೆಗಳ ಪೇಜ್ ಬಿಜೆಪಿ ಐಟಿ ಸೆಲ್ ನಲ್ಲಿ ತಯಾರಾಗಿರೋದು ಅಂತಿದ್ದಾರೆ.
ದೊಡ್ಡ ದೊಡ್ಡ ಹೆಸರಿನ ಸಂಪಾದಕರು ಕಾರ್ಯ ನಿರ್ವಹಿಸುವ ಪತ್ರಿಕೆಗಳ ದುಸ್ಥಿತಿ ಕಂಡು ಜನ ಮರುಗುತ್ತಿದ್ದಾರೆ. ಹಣಕ್ಕಾಗಿ ಪತ್ರಿಕೆಗಳು ಮಾಧ್ಯಮಗಳು ಏನು ಬೇಕಾದ್ರೂ ಮಾಡುತ್ತವೆ ಎನ್ನುವ ಮಾತುಗಳು ಪತ್ರಿಕೆಗಳ ‘ಸಮವಸ್ತ್ರ’ ಸುದ್ದಿಯ ಕುರಿತು ಕೇಳಿ ಬಂದಿದೆ. ಇನ್ನೂ ಪತ್ರಿಕೆಗಳು ಗ್ಯಾಂಗ್ ಕಟ್ಟಿಕೊಂಡು ಒಂದೇ ರೀತಿಯ ಸುದ್ದಿಗಳನ್ನು ಪ್ರಕಟಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka