ಸಾಹಿತ್ಯ,  ಸಾಂಸ್ಕೃತಿಕ  ಕಲೆಗಳ ಕಣಜ ಕನ್ನಡನಾಡು. ಕನ್ನಡವೇ ಸತ್ಯ ಕನ್ನಡವೇ ನಿತ್ಯ | ದಂಡಾಧಿಕಾರಿ, ಪಟ್ಟರಾಜ್ ಗೌಡ - Mahanayaka
10:54 AM Wednesday 15 - January 2025

ಸಾಹಿತ್ಯ,  ಸಾಂಸ್ಕೃತಿಕ  ಕಲೆಗಳ ಕಣಜ ಕನ್ನಡನಾಡು. ಕನ್ನಡವೇ ಸತ್ಯ ಕನ್ನಡವೇ ನಿತ್ಯ | ದಂಡಾಧಿಕಾರಿ, ಪಟ್ಟರಾಜ್ ಗೌಡ

02/11/2020

ಚನ್ನಗಿರಿ:  ಧರ್ಮ, ಸಾಹಿತ್ಯ, ಸಾಂಸ್ಕೃತಿಕ, ಕಲೆಗಳ ಕಣಜ ಕನ್ನಡನಾಡು  ಕನ್ನಡ ನಾಡು ನುಡಿ  ಜಲ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಎಂದು ಚನ್ನಗಿರಿ ದಂಡಾದಿಕಾರಿಗಳಾದ ಪಟ್ಟರಾಜ್ ಗೌಡ ತಿಳಿಸಿದರು.


ತಾಲೂಕು ಕ್ರೀಡಾಂಗಣದಲ್ಲಿ ನಡೆದ 65 ನೇಯ ಕನ್ನಡ ರಾಜ್ಯೋತ್ಸವದ ಧ್ವಜರೋಹಣ ನೆರವೇರಿಸಿ ಮಾತನಾಡಿದ ಇವರು 1956 ರಲ್ಲಿ ಏಕೀಕರಣಗೊಂಡ ಕರ್ನಾಟಕ ಎನ್ನುವ ಹೆಸರನ್ನು ಪಡೆದುಕೊಂಡು ಕಲೆ ಸಾಹಿತ್ಯ-ಸಂಸ್ಕೃತಿ ನೆಲ-ಜಲ ಮುಂತಾದ ನೈಸರ್ಗಿಕ ವೈಶಿಷ್ಟತೆಯನ್ನು  ಪಡೆದುಕೊಂಡಿರುವ ನಾಡಾಗಿದೆ ಎಂದು ಅವರು ಹೇಳಿದರು.



ADS

ಕರ್ನಾಟಕ ಒಂದು ವಿಶಿಷ್ಟ ಭೂಪ್ರದೇಶ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ತನ್ನ ಕಲಾವಂತಿಕೆ ಸಾಹಿತ್ಯ , ಜನಪದ ಸತ್ವ. ಆಧ್ಯಾತ್ಮಿಕ. ಧಾರ್ಮಿಕ ಚಿಂತನೆಗಳ ಮೂಲಕ ಗುರುತಿಸಿಕೊಂಡು ಇಡೀ ವಿಶ್ವಕ್ಕೆ ಲಿಪಿಗಳ ರಾಣಿ ಕನ್ನಡ ಭಾಷೆ ಎಂದು ಗುರುತಿಸಿಕೊಂಡಿದೆ. ಚಂಪೂ ವಚನ ಕೀರ್ತನೆ, ತ್ರಿಪದಿ ಸಾಂಗತ್ಯ ,ಕಥೆ ,ಕವನ, ನಾಟಕ ವಿಮರ್ಶೆಗಳಿಂದ  ಶ್ರೀಮಂತ ಭಾಷೆಯಾಗಿರುವುದು  ಕನ್ನಡ ಭಾಷೆ. ಇಲ್ಲಿ ಕಾವೇರಿ  ಕೃಷ್ಣ  ಘಟಪ್ರಭಾ ಮಲಪ್ರಭಾ ತುಂಗಭದ್ರಾ ನದಿಗಳು ಹರಿಯುತ್ತವೆ ಎಂದು ಅವರು ಹೇಳಿದರು.


ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಘೋಷಣೆಯೊಂದಿಗೆ ಸಂದೇಶವನ್ನು ಸಾರಿದರು . ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷರಾದ  ಕವಿತಾ ಕಲ್ಲೇಶ್ ವಹಿಸಿದ್ದರು.  ಡಿವೈಎಸ್ಪಿ ಪ್ರಶಾಂತ್ ಮನೋಳಿ. ವೃತ್ತ ನಿರೀಕ್ಷಕರು ಆರ್ ಪಾಟೀಲ್. ಜಿಲ್ಲಾ ಪಂಚಾಯತ್ ಸದಸ್ಯ  ಮಂಜುಳಾ , ಟಿವಿ ರಾಜು ತಾಪಂ ಸದಸ್ಯರುಗಳಾದ  ಪುಷ್ಪ,  ಕುಮಾರ್ ನಾಯಕ್. ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಚಂದ್ರಮ್ಮ ರುದ್ರಪ್ಪ. ಪುರಸಭೆಯ ಸದಸ್ಯರಾದ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ. ಸವಿತಾ ರಾಘವೇಂದ್ರ ಶೆಟ್ಟಿ. ಚಿಕ್ಕಣ್ಣ. ಪರಮೇಶ್ವರಪ್ಪ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಮಂಜುನಾಥ್ ಪುರಸಭೆಯ ಮುಖ್ಯಾಧಿಕಾರಿ ಬಸವರಾಜಪ್ಪ. ಸಂತೇಬೆನ್ನೂರು  ಪಿಎಸ್ ಐ ಶಿವರುದ್ರಪ್ಪ ಮೇಟಿ . ಚನ್ನಗಿರಿ ಪಿಎಸ್ ಐ , ಜಿ ಜಗದೀಶ್ . ಎಂಬಿ ನಾಗರಾಜ್ ಕಾಕನೂರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಇತ್ತೀಚಿನ ಸುದ್ದಿ