ಕಣ್ಣಿಗೆ ಜಿಗಣೆ ಹೋಗಿದೆ ಎಂದು ಕಣ್ಣಿನ ಗುಡ್ಡೆಯನ್ನೇ ಕಿತ್ತೆಸೆದ ವ್ಯಕ್ತಿ
ಶಿವಮೊಗ್ಗ: ಕಣ್ಣಿಗೆ ಜಿಗಣೆ ಹೋಗಿದೆ ಎಂದು ಭಾವಿಸಿ ವ್ಯಕ್ತಿಯೊಬ್ಬರು ತಮ್ಮ ಕೈಯಿಂದಲೇ ಕಣ್ಣಿನ ಗುಡ್ಡೆಯನ್ನು ಕಿತ್ತು ಹಾಕಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಪ್ರಕರಣದ ವಿವರ: ಜ.12 ರಂದು ರಾತ್ರಿ ಟಿವಿ ನೋಡುತ್ತಿದ್ದ ನಂಜುಂಡಸ್ವಾಮಿ ಎಂಬವರು ಮನೆಯಿಂದ ಹೊರಗೆ ಬಂದಿದ್ದಾರೆ. ನಂತರ ಮಕ್ಕಳಿಗೆ ಚಾಕಲೇಟ್ ಕೊಡಿಸಿ ಮನೆಯ ಹೊರಗೆ ಕುಳಿದ್ದಾರೆ. ಈ ವೇಳೆ ಕಣ್ಣೊಳೊಗೆ ಹುಳ ಹೋಗಿದೆ ಎಂದು ಭಾವಿಸಿ ಬಲ ಕಣ್ಣಿನ್ನು ಕೈಯಿಂದ ಕಿತ್ತು ನೆಲಕ್ಕೆ ಬಿಸಾಕಿದ್ದಾರೆ.
ಅಷ್ಟೇ ಅಲ್ಲದೆ ಮೊಮ್ಮಗನನ್ನು ಕರೆದು ನನ್ನ ಕಣ್ಣೊಳಗೆ ಜಿಗಣೆ ಹೋಗಿತ್ತು ಅದನ್ನು ಕಿತ್ತು ನೆಲಕ್ಕೆ ಹಾಕಿದ್ದೇನೆ. ಅದು ನನ್ನ ರಕ್ತ ಕುಡಿದಿದ್ದು ಹೊಡೆದು ಸಾಯಿಸುವಂತೆ ಹೇಳಿದ್ದಾರೆ. ಕತ್ತಲೆಯಲ್ಲಿ ಸರಿಯಾಗಿ ಕಾಣದ ಕಾರಣ ಅಜ್ಜ ಹೇಳಿದಂತೆ ಮೊಮ್ಮಗ ಕೋಲಿನಿಂದ ಕಣ್ಣನ್ನು ಜಜ್ಜಿ ಹಾಕಿದ್ದಾನೆ.
ಅದೇ ವೇಳೆ ತಮ್ಮ ತಂದೆಯ ಬಲ ಕಣ್ಣಿನಿಂದ ರಕ್ತ ಸ್ರಾವವಾಗುತ್ತಿದ್ದನ್ನು ನಂಜುಂಡಸ್ವಾಮಿ ಅವರ ಮಗ ಷಣ್ಮುಖ ಗಮನಿಸಿದ್ದಾರೆ. ಆಗ ಅವರಿಗೆ ತಮ್ಮ ಮಗ ಹೊಡೆದು ಹಾಕಿದ್ದು ಜಿಗಣೆಯಲ್ಲ ತಂದೆಯ ಕಣ್ಣು ಎಂಬುದು ಅರಿವಾಗಿದೆ.
ತಕ್ಷಣ ನಂಜುಂಡಸ್ವಾಮಿ ಅವರನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಾಲೆಗೆ ಹೋಗಿದ್ದ ಶಿಕ್ಷಕ ರಸ್ತೆ ಬದಿ ಅನುಮಾನಾಸ್ಪದ ಸಾವು
ಹಿಂದಿಯ ಖ್ಯಾತ ಕಿರುತೆರೆ ನಟಿಯ ಮೇಲೆ ಅತ್ಯಾಚಾರ: ದೂರು ದಾಖಲು
ಒಳ ಉಡುಪಿನಲ್ಲಿ ಜೈಲಿನೊಳಗೆ ಡಗ್ಸ್ ಸಾಗಿಸುತ್ತಿದ್ದ ಅಧಿಕಾರಿ ಬಂಧನ
ಹೈಟೆಕ್ ವೇಶ್ಯಾವಾಟಿಕೆ ದಂಧೆ: ಕಾಲೇಜು ವಿದ್ಯಾರ್ಥಿನಿಯರು ಸೇರಿ ನಾಲ್ವರು ಯುವತಿಯರ ರಕ್ಷಣೆ
ಮಗುವಿಗೆ ಹಾಲುಣಿಸುತ್ತಿದ್ದ ವೇಳೆಯೇ ತಾಯಿಗೆ ಡಿಕ್ಕಿ ಹೊಡೆದ ಕಾರು: ತಾಯಿ ಸಾವು