ಕಣ್ಣೂರು: ಕಾರಿಗೆ ಬೆಂಕಿ ಹತ್ತಿಕೊಂಡು ದಂಪತಿ ಮೃತಪಟ್ಟ ಪ್ರಕರಣ: ಬೆಂಕಿ ಹತ್ತಿಕೊಳ್ಳಲು ಕಾರಣ ಬಯಲು - Mahanayaka
1:16 PM Thursday 12 - December 2024

ಕಣ್ಣೂರು: ಕಾರಿಗೆ ಬೆಂಕಿ ಹತ್ತಿಕೊಂಡು ದಂಪತಿ ಮೃತಪಟ್ಟ ಪ್ರಕರಣ: ಬೆಂಕಿ ಹತ್ತಿಕೊಳ್ಳಲು ಕಾರಣ ಬಯಲು

kannuru car burn case
04/03/2023

ಕಣ್ಣೂರು: ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಾರಿಗೆ ಬೆಂಕಿ ಹತ್ತಿಕೊಂಡು ಗರ್ಭಿಣಿ ಮಹಿಳೆ ಹಾಗೂ ಪತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಫೆ.2ರಂದು ಕೇರಳದ ಕಣ್ಣೂರಿನಲ್ಲಿ ನಡೆದಿತ್ತು. ಇದೀಗ ಈ ಘಟನೆಯ ಕಾರಣ ಬಯಲಾಗಿದೆ.

ಕಾರಿಗೆ ಬೆಂಕಿ ಹತ್ತಿಕೊಳ್ಳಲು ಕಾರಣ ಏನು ಅನ್ನೋ ಪ್ರಶ್ನೆಗೆ ಉತ್ತರ ಹುಡುಕಲು ಕೇರಳ ಸಾರಿಗೆ ಇಲಾಖೆ ಸಾಕಷ್ಟು ಪ್ರಯತ್ನಗಳನ್ನು ನಡೆಸಿತ್ತು. ಆದರೆ ಇದೀಗ ಕಾರಿನೊಳಗೆ ಇಟ್ಟಿದ್ದ ಪೆಟ್ರೋಲ್ ಕಾರಿಗೆ ಬೆಂಕಿ ತಗಲಲು ಕಾರಣವಾಗಿದೆ ಅನ್ನೋ ವರದಿಯನ್ನು ಕೇರಳ ಥಲಿಪರಂಬುವಿನ ಸಬ್ ಜ್ಯುಡಿಶಿಯಲ್ ಕೋರ್ಟ್ ಗೆ ಸಲ್ಲಿಸಲಾಗಿದೆ.

ಘಟನೆಯ ಬಳಿಕ ಸುಮಾರು ಒಂದು ತಿಂಗಳ ಕಾಲ ನಡೆದ ತನಿಖೆಯ ಬಳಿಕ ಈ ವರದಿಯನ್ನು ಸಲ್ಲಿಸಲಾಗಿದೆ. ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರಿಗೆ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಪೊಲೀಸರ ತನಿಖೆಯ ವೇಳೆ ಕಾರಿನಲ್ಲಿದ್ದ ಕೆಲವು ವಸ್ತುಗಳಿಂದಾಗಿ ಕಾರಿಗೆ ಬೆಂಕಿ ಹತ್ತಿಕೊಂಡಿರಬಹುದೇ ಎಂದು ಸಾರಿಗೆ ಇಲಾಖೆ ಅಧಿಕಾರಿ ಪಿ.ವಿ. ಬಿಜು ಶಂಕಿಸಿದ್ದರು.

ಕಾರಿನಲ್ಲಿ ಎರಡು ಪ್ಲಾಸ್ಟಿಕ್ ಬಾಟಲಿಗಳು ದೊರೆತ ವೇಳೆ ಈ ಅನುಮಾನಕ್ಕೆ ಇನ್ನಷ್ಟು ಬಲ ದೊರಕಿತ್ತು.  ಆ ಬಾಟಲಿಗಳಲ್ಲಿ ಏನಿತ್ತು ಅನ್ನೋ ಬಗ್ಗೆ ಕೆಮಿಕಲ್ ಟೆಸ್ಟ್ ಗೆ ಕಳುಹಿಸಲಾಗಿತ್ತು. ಟೆಸ್ಟ್ ನ ವರದಿಯಲ್ಲಿ ಬಾಟಲಿಯಲ್ಲಿ ಪೆಟ್ರೋಲ್ ಇತ್ತು ಅನ್ನೋದು ಪತ್ತೆಯಾಗಿದೆ.

ಇನ್ನೂ ಕಾರಿನಲ್ಲಿದ್ದ ಪೆಟ್ರೋಲ್ ನಿಂದ ಬೆಂಕಿ ಹತ್ತಿಕೊಂಡಿತೇ ಅಥವಾ ಕಾರಿಗೆ ಬೆಂಕಿ ಹತ್ತಿಕೊಂಡ ಬಳಿಕ ಬಾಟಲಿಯಲ್ಲಿದ್ದ ಪೆಟ್ರೋಲ್ ಗೂ ಬೆಂಕಿ ಹತ್ತಿಕೊಂಡಿತೇ ಅನ್ನೋ ಪ್ರಶ್ನೆಗಳು ಕೂಡ ಕೇಳಿ ಬಂದಿದೆ. ಪೊಲೀಸರು ಏಕ ಪಕ್ಷೀಯವಾಗಿ ಇದನ್ನು ತನಿಖೆ ಮಾಡಿದರೆ ಅನ್ನೋ ಪ್ರಶ್ನೆಗಳು ಕೂಡ ಕೇಳಿ ಬಂದಿದೆ. ಮೃತ ರೀಶಾಳ ತಂದೆ ಕಾರಿನಲ್ಲಿದ್ದ ಪೆಟ್ರೋಲ್ ನಿಂದ ಬೆಂಕಿ ಹತ್ತಿಕೊಂಡಿದೆ ಅನ್ನೋ ಅಧಿಕಾರಿಗಳ ವಾದವನ್ನು ಈ ಹಿಂದೆಯೇ ತಳ್ಳಿ ಹಾಕಿದ್ದರು.

ಫೆ.2ರಂದು ಬೆಳಗ್ಗೆ ಕಣ್ಣೂರು ಮೂಲದ ರೀಶಾ (26) ಮತ್ತು ಪತಿ ಪ್ರಿಜಿತ್​ (35) ಇಬ್ಬರು ಆಸ್ಪತ್ರೆಗೆ ತೆರಳುತ್ತಿದ್ದರು. ಗರ್ಭಿಣಿ ರೀಶಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. 2020 ಮಾರುತಿ ಎಸ್​- ಪ್ರೆಸ್ಸೋ ಕಾರಿನಲ್ಲಿ ಒಟ್ಟು 6 ಮಂದಿ ತೆರಳುತ್ತಿದ್ದರು. ಒಂದು ಮಗು ಸೇರಿದಂತೆ ನಾಲ್ವರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಕಾರಿನಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಹಿಂದೆ ಕುಳಿತ್ತಿದ್ದವರು ಎಸ್ಕೇಪ್​ ಆದರು. ಆದರೆ, ಮುಂದೆ ಕುಳಿತಿದ್ದ ದಂಪತಿಯ ಕೈಯಿಂದ ಕಾರಿನ ಬಾಗಿಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ