ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ವಾಹನಗಳನ್ನು ತಡೆದ ಯುವತಿ | “ಏನಾಯ್ತಮ್ಮಾ…” ಎಂದು ಕೇಳಲು ಹೋದವರಿಗೆ ಅವಾಚ್ಯ ಬೈಗುಳ! - Mahanayaka

ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ವಾಹನಗಳನ್ನು ತಡೆದ ಯುವತಿ | “ಏನಾಯ್ತಮ್ಮಾ…” ಎಂದು ಕೇಳಲು ಹೋದವರಿಗೆ ಅವಾಚ್ಯ ಬೈಗುಳ!

maharashtra viral video
04/09/2021

ಮಹಾರಾಷ್ಟ್ರ: ಯುವತಿಯೋರ್ವಳು ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿಯೇ ಸಾರ್ವಜನಿಕರಿಗೆ ತೊಂದರೆ ನೀಡಿದ ಘಟನೆ ಮಹಾರಾಷ್ಟ್ರದ ಅಂಬರ್ ನಾಥ್ ಪೂರ್ವದಲ್ಲಿರುವ ಗೋವಿಂದ ಸೇತುವೆ ಬಳಿಯ ಡಿಪಿ ರಸ್ತೆಯಲ್ಲಿ ನಡೆದಿದೆ.


Provided by

ಯುವತಿಯ ರಾದ್ದಾಂತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೀನ್ಸ್ ಪ್ಯಾಂಟ್ ಹಾಗೂ ಕೆಂಪು ಬಣ್ಣದ ಟಾಪ್ ಧರಿಸಿದ್ದ ಯುವತಿ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ನಡು ರಸ್ತೆಯಲ್ಲಿ ನಿಂತು  ವಾಹನಗಳನ್ನು ತಡೆದು ಬಾಯಿಗೆ ಬಂದಂತೆ ಬೈದಿದ್ದಾಳೆ.

ಈ ವೇಳೆ ಆಕೆಗೆ ಏನು ಸಮಸ್ಯೆ ಎಂದು ಕೇಳೋಣ ಎಂದು ಹೋದವರಿಗೆ ಅವಾಚ್ಯ ಶಬ್ದಗಳಿಂದ ಆಕೆ ಬೈದಿದ್ದು, ಸಮಾಧಾನ ಮಾಡಲು ಹೋದವರು ಬೇಸರದಿಂದ ವಾಪಸ್ದಾಗಿದ್ದಾರೆ. ಈಕೆಯ ಹೈಡ್ರಾಮ ನೋಡಲು ಜನರು ರಸ್ತೆ ಬದಿಯಲ್ಲಿ ನೆರೆದು ಬಿಟ್ಟಿ ಮಜಾ ಪಡೆದುಕೊಳ್ಳುತ್ತಿದ್ದರು. ಆದರೆ, ಇದನ್ನು ನೋಡಲಾಗದ ಯಾರೋ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಪೊಲೀಸರು ಬರುವ ಮೊದಲೇ ಯುವತಿಯ ಸ್ನೇಹಿತನ ಕಾರು ಬಂದಿದ್ದು, ಆಕೆ ಕಾರಿನಲ್ಲಿ ತೆರಳಿದ್ದಾಳೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದಲ್ಲಿ ರಸ್ತೆ ಬದಿಯಲ್ಲಿ ಕುಡುಕರ ಕಾಟ ಮಿತಿ ಮೀರಿದೆ. ಇದೀಗ ಹೆಣ್ಣು ಮಕ್ಕಳು ಕೂಡ ಕುಡಿದು ತೂರಾಡುತ್ತಾ ರಸ್ತೆಯಲ್ಲಿ ರಾದ್ಧಾಂತ ಎಬ್ಬಿಸುತ್ತಿದ್ದಾರೆ. ಪೊಲೀಸರು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಪೊಲೀಸರು ಗಸ್ತು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Provided by

ಇನ್ನಷ್ಟು ಸುದ್ದಿಗಳು…

ಹಾಸ್ಟೆಲ್ ನ ರಹಸ್ಯ ಮುಚ್ಚಿ ಹಾಕಲು ಅತ್ಯಾಚಾರದ ಕಥೆ ಕಟ್ಟಿದ ವಿದ್ಯಾರ್ಥಿನಿ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ರದ್ದಾಗಲಿ | ಸಿಪಿಐ(ಎಂ) ಒತ್ತಾಯ

ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

1ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ತೆರೆಯುವ ಚಿಂತನೆ ಸದ್ಯಕ್ಕಿಲ್ಲ | ಸಚಿವ ಸುಧಾಕರ್

ವಿಷಜಂತು ಕಡಿದು ತಂದೆ, ಮಗ ಇಬ್ಬರೂ ಸಾವು

ಅಫ್ಘಾನಿಸ್ತಾನದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ಹುಡುಕಾಡುತ್ತಿರುವ ತಾಲಿಬಾನಿಗಳು | ಡೆತ್ ಸ್ಕ್ವಾಡ್ ಆರಂಭ

ಸಾ.ರಾ.ಮಹೇಶ್ ಒಡೆತನದ ಜಾಗಗಳ ಮರು ಸರ್ವೇಗೆ ಆದೇಶ: ರೋಹಿಣಿ ಸಿಂಧೂರಿ ಆರೋಪಗಳಿಗೆ ಮರುಜೀವ

ಜನ್ಮ ನೀಡಿದ ತಂದೆಗೆ ನಡು ಬೀದಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಇಬ್ಬರು ಮಕ್ಕಳು!

ಇತ್ತೀಚಿನ ಸುದ್ದಿ