ಕಾಂತಾರ ಅಧ್ಯಾಯ 01: ಫಸ್ಟ್ ಲುಕ್ ಗೆ ಮನಸೋತ ಸಿನಿಪ್ರಿಯರು

ರಿಷಬ್ ಶೆಟ್ಟಿ ನಿರ್ದೇಶನ ನಟನೆಯ ಕಾಂತಾರ ಚಿತ್ರ ದಾಖಲೆ ಸೃಷ್ಟಿಸಿತ್ತು. ಹಾಗೆಯೇ ಚಿತ್ರ ಸಾಕಷ್ಟು ವಿವಾದಗಳಿಗೂ ಕಾರಣವಾಗಿತ್ತು. ದೈವಾರಾಧನೆ ಹಾಗೂ ವರಾಹ ರೂಪಂ ಎಂಬ ಹಾಡಿನ ವಿಚಾರದಲ್ಲಿ ಸಾಕಷ್ಟು ಸುದ್ದಿಯೂ ಆಗಿತ್ತು. ಆದ್ರೆ ಈ ಚಿತ್ರ ಜನರಿಗೆ ಉತ್ತಮ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ದಾಖಲೆ ಬರೆದಿತ್ತು.
ಇದೀಗ ಚಿತ್ರ ತಂಡ ಕಾಂತಾರ ಅಧ್ಯಾಯ 1ರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮಾಡಿರುವ ಫಸ್ಟ್ ಲುಕ್ ನಲ್ಲಿ ಕೈಯಲ್ಲಿ ತ್ರಿಶೂಲ, ಕೊಡಲಿ ಹಿಡಿದು ರಿಷಬ್ ನಿಂತಿರುವುದನ್ನು ಕಾಣಬಹುದಾಗಿದೆ.
ತುಳುನಾಡಿನ ದೈವಾರಾಧನೆಯ ವಿಷಯವನ್ನೆತ್ತಿಕೊಂಡು ಕಾಂತಾರ ಸಿನಿಮಾ ಮಾಡಿದ್ದ ರಿಷಬ್ ಶೆಟ್ಟಿ, ಸಾಕಷ್ಟು ಪರ ವಿರೋಧಗಳ ಚರ್ಚೆಗಳಿಗೆ ಕಾರಣವಾಗಿದ್ದರು. “ನಾನು ಸಿನೆಮಾ ಮಾಡುತ್ತೇನೆ, ನೀವು ವಿಮರ್ಶೆ ಮಾಡಿ” ಎಂದು ಕಾಂತಾರ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಸೃಷ್ಟಿಯಾದ ವಿವಾದಗಳಿಗೆ ಅವರು ಉತ್ತರ ನೀಡಿದ್ದರು.

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by <

Provided by

Provided by

Provided by

Provided by
ಇದೀಗ ಕಾಂತಾರ 01 ಅಧ್ಯಾಯದಲ್ಲಿ ರಿಷಬ್ ಶೆಟ್ಟಿಯ ಹೊಸ ಅವತಾರ, ಮತ್ತೆ ಒಂದು ಉತ್ತಮ ಮನರಂಜನೆಯ ಚಿತ್ರವನ್ನು ರಿಷಬ್ ಶೆಟ್ಟಿ ಸಿನಿಮಾ ಪ್ರಿಯರಿಗೆ ನೀಡಲಿದ್ದಾರೆ ಎನ್ನುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಅಂದ ಹಾಗೆ ಕಾಂತಾರ ಚಿತ್ರದ ಮೊದಲ ಭಾಗವನ್ನು ವೀಕ್ಷಿಸಿದ್ದ ಜನರು ಕಾಂತಾರ ಅಧ್ಯಾಯ 01 ನ್ನು ವೀಕ್ಷಿಸಲು ಕಾಯ್ತಾ ಇದ್ದಾರೆ.