ವಿದೇಶಿ ನೆಲದಲ್ಲಿ ಭಾರತದ ಸಿನಿಮೋತ್ಸವ: ಮೆಲ್ಬೋರ್ನ್‌ನಲ್ಲಿ ಫಿಲಂ ಫೆಸ್ಟಿವಲ್ ನಲ್ಲಿ ‘ಕಾಂತಾರ’ ಕಮಾಲ್

ರಾಜ್ಯದಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭರ್ಜರಿ ಮೆಚ್ಚುಗೆಗೆ ಪಾತ್ರವಾಗಿರುವ ‘ಕಾಂತಾರ’ ಸಿನಿಮಾಗೆ ಮತ್ತೊಂದು ಗೌರವ ದೊರೆತಿದೆ. ನಾನಾ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡ ಈ ಸಿನಿಮಾ ಇದೀಗ ‘ಮೆಲ್ಬೋರ್ನ್‌ನ ಭಾರತೀಯ ಚಲನಚಿತ್ರೋತ್ಸವ 2023’ರಲ್ಲಿ ಹಲವು ವಿಭಾಗಗಳಲ್ಲಿ ಆಯ್ಕೆಯಾಗಿದೆ.
ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾ ಬಿಡುಗಡೆಗೊಂಡು ಈವರೆಗೂ ಹಲವು ದಾಖಲೆಗಳನ್ನು ಮಾಡಿದೆ. ಕನ್ನಡದಲ್ಲಿ ರಿಲೀಸ್ ಆದ ನಂತರ ಈ ಸಿನಿಮಾಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬೇರೆ ಬೇರೆ ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡಲಾಯ್ತು. ಕರ್ನಾಟಕದಲ್ಲೇ ಈ ಸಿನಿಮಾವು 180 ಕೋಟಿಗೂ ಅಧಿಕ ಗಳಿಕೆ ಮಾಡಿದೆ.
ಭಾರತದಲ್ಲಿ ಕಾಂತಾರ ಸಿನಿಮಾವು 400 ಕೋಟಿಗೂ ಹೆಚ್ಚು ಹಣವನ್ನು ಕಲೆಕ್ಷನ್ ಮಾಡಿ ವಿಶ್ವಾದ್ಯಂತ ಒಟ್ಟಾರೆ ಈ ಸಿನಿಮಾದ ಗಳಿಕೆಯು 350 ಕೋಟಿ ರೂಪಾಯಿ ಗಡಿ ತಲುಪಿರುವ ಮಾಹಿತಿ ಇದೆ. ಈ ಸಿನಿಮಾದ ವಿತರಣೆ ಹಕ್ಕುಗಳನ್ನು ಪಡೆದುಕೊಂಡ ವಿತರಕರು ಸಖತ್ ಲಾಭ ಮಾಡಿಕೊಂಡಿದ್ದಾರೆ.
ಇಷ್ಟೆಲ್ಲಾ ದಾಖಲೆಗಳನ್ನು ಮಾಡಿರುವ ಕನ್ನಡದ ಈ ಸಿನೆಮಾ ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವದ 14ನೇ ಆವೃತ್ತಿಗೆ ಆಯ್ಕೆ ಆಗಿದ್ದು, ಅದರ ನಾಮಿನೇಷನ್ ಪಟ್ಟಿ ಬಿಡುಗಡೆಗೊಂಡಿದೆ. ವಿದೇಶದ ನೆಲದಲ್ಲಿ ನಡೆಯುವ ಭಾರತದ ಸಿನಿಮೋತ್ಸವದಲ್ಲಿ ಮತ್ತೊಮ್ಮೆ ‘ಕಾಂತಾರ’ ಕಾಣಿಸಿಕೊಳ್ಳಲಿದೆ.
ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಕಾಂತಾರ ಸೇರಿದಂತೆ ಹಿಂದಿಯ ಭೇಡಿಯಾ, ಬ್ರಹ್ಮಾಸ್ತ್ರ ಡಾರ್ಲಿಂಗ್ಸ್, ಮೋನಿಕಾ, ಓ ಮೈ ಡಾರ್ಲಿಂಗ್ ಹಾಗೂ ಪಠಾಣ್ ಪಂಜಾಬಿಯ ಜೋಗಿ, ತಮಿಳಿನ ಪೊನ್ನಿಯಿನ್ ಸೆಲ್ವನ್ 1,2 ಮತ್ತು ತೆಲುಗುವಿನ ಸೀತಾ ರಾಮಂ ಸಿನೆಮಾಗಳು ಆಯ್ಕೆಗೊಂಡಿದೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw