ಕರಂಬಾರು: ನಾಗರಿಕ ಸೇವಾ ಸಮಿತಿ 11ನೇ ವರ್ಷದ ವಾರ್ಷಿಕೋತ್ಸವ - Mahanayaka

ಕರಂಬಾರು: ನಾಗರಿಕ ಸೇವಾ ಸಮಿತಿ 11ನೇ ವರ್ಷದ ವಾರ್ಷಿಕೋತ್ಸವ

karumbaru
31/03/2025


Provided by

ಮಂಗಳೂರು:  ನಾಗರಿಕ ಸೇವಾ ಸಮಿತಿ (ರಿ) ಅಂಬೇಡ್ಕರ್ ನಗರ ಕರಂಬಾರು ಇದರ 11ನೇ ವರ್ಷದ ವಾರ್ಷಿಕೋತ್ಸವ ಅಂಬೇಡ್ಕರ್ ನಗರ ಕರಂಬಾರಿನಲ್ಲಿ ನಡೆಯಿತು.


Provided by

ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಡಿ ಫುಡ್ಸ್ ಪೇಜಾವರ ಮಾಲಿಕರಾದ ನಂದಕುಮಾರ್ ಶೆಟ್ಟಿ ನೆರವೇರಿಸಿದರು. ಬಳಿಕ ಮಾತನಾಡಿದ ಅವರು,  ನಾಗರಿಕ ಸೇವಾ ಸಮಿತಿಯ ಕೆಲಸ ಕಾರ್ಯವನ್ನು ಶ್ಲಾಘಿಸಿ, ಊರಿನ ಅಭಿವೃದ್ಧಿಯಲ್ಲಿ ನಾಗರಿಕ ಸೇವಾ ಸಮಿತಿಯ ಪಾತ್ರವನ್ನು ಕೊಂಡಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೋಜರಾಜ್ ಕೋಟ್ಯಾನ್ ಮಾತನಾಡಿ, ಸಮಿತಿಯಿಂದ ಸಮಾಜಮುಖಿ ಕಾರ್ಯಗಳು ಹಿಂದೆಯೂ ಮುಂದೆಯೂ ಹಾಗೂ ಎಂದೆಂದಿಗೂ ಆಗುತ್ತದೆ ಎಂದು ಭರವಸೆಯನ್ನು ನೀಡಿದರು.


Provided by

ಇನ್ನೂ ಮುಂದೆ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನಮ್ಮ ಸಮಿತಿಯಿಂದ ನೆರವೇರಿಸುವ ಕಾರ್ಯದಲ್ಲಿ ತೊಡಗುವಲ್ಲಿ ನಾವೆಲ್ಲರೂ ಮುಂದಾಗುತ್ತೇವೆ ಎಂದು  ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಗನ್ನಾಥ್ ಸಾಲ್ಯಾನ್ (ಅಧ್ಯಕ್ಷರು ಶ್ರೀ ಮಾರಿಯಮ್ಮ ಕೋಟೆ ಬಬ್ಬು ಸ್ವಾಮಿ ದೈವಸ್ಥಾನ ಕರಂಬಾರು, ರಾಜೇಶ್ ಅಮೀನ್ (ಅಧ್ಯಕ್ಷರು ಬಿಜೆಪಿ ರೈತ ಮೋರ್ಚಾ ಮೂಲ್ಕಿ ಮೂಡಬಿದ್ರೆ ಮಂಡಲ ), ವಾಸು ಪೇಜಾವರ್  ( ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಮಳವೂರು, ಸತೀಶ್ ದೇವಾಡಿಗ (ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ (ರಿ ) ಕರಂಬಾರು, ವಿಶ್ವನಾಥ್ ಕೋಟ್ಯಾನ್ (HPCL ನೌಕರ),  ಗೋಪಾಲಕೃಷ್ಣ ಪುನರೂರು ಅಧ್ಯಕ್ಷರು ಬಿಜೆಪಿ ಎಸ್ ಸಿ ಮೋರ್ಚಾ ಮೂಲ್ಕಿ ಮೂಡಬಿದ್ರೆ ಮಂಡಲ,  ದಿನೇಶ್ ಶೆಟ್ಟಿ (ಪ್ರಧಾನ ಕಾರ್ಯದರ್ಶಿ ಬಿಜೆಪಿ ಬಜಪೆ ಶಕ್ತಿ ಕೇಂದ್ರ ),  ರಮೇಶ್  ಸುವರ್ಣ ( ಮಾಜಿ ಸಂಚಾಲಕರು ಕರ್ನಾಟಕ ದಲಿತ  ಸಂಘರ್ಷ ಸಮಿತಿ ಸ್ವಾಭಿಮಾನಿ ಕೃಷ್ಣಪ್ಪ ಸ್ಥಾಪಿತ ಬಣ ), ಗ್ರೇಶನ್ ಡಿ ಕೋಸ್ತ (ಅಧ್ಯಕ್ಷರು ನಮ್ಮ ಜವನೆರ್ ಕರಂಬಾರು), ಶಶಿಕಲಾ ರಮೇಶ್ (ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಮಳವೂರು), ಮುಂತಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ರಾಜೇಶ್ ಅಮೀನ್ ಹಾಗೂ ಸವಿತಾ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ತೃಪ್ತಿ  ಬಿ.ಕೆ. ನಿರೂಪಿಸಿ, ಕೃತಿ ಬಿ. ಕೋಟ್ಯಾನ್ ಸ್ವಾಗತಿಸಿ, ರಾಕೇಶ್ ಕುಂದರ್ ವಂದಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ