ಕರಂಬಾರು ಶಾಲಾ ವಾರ್ಷಿಕ ಕ್ರೀಡಾಕೂಟ
ಬಜೆಪೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿನ ಶಾಲಾ ವಾರ್ಷಿಕ ಕ್ರೀಡಾಕೂಟ ಮರವೂರು ಮಾಪ್ಸ್ ಕಾಲೇಜು ಕ್ರೀಡಾಂಗಣದಲ್ಲಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಗುಣಪಾಲ್ ದೇವಾಡಿಗ ವಹಿಸಿದ್ದರು. ಮಾಪ್ಸ್ ಕಾಲೇಜಿನ ಚೆರ್ಮನ್ ದಿನೇಶ್ ಕುಮಾರ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸತೀಶ್ ದೇವಾಡಿಗ (ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು )ಗಣೇಶ್ ಅರ್ಬಿ (ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮಳವೂರ್ )ಉಮೇಶ್ ಶೆಟ್ಟಿ ಮರವೂರ್, ಕೆನರಾ ಬ್ಯಾಂಕ್ ಕೆಂಜಾರು ಶಾಖೆಯ ಮ್ಯಾನೇಜರ್ ಸ್ವರೂಪ ರಾಕೇಶ್, ಗ್ರೇಷನ್ ಡಿಕೊಸ್ತಾ (ಅಧ್ಯಕ್ಷರು ನಮ್ಮ ಜವನೆರ್ ಕರಂಬಾರು )ರಮೇಶ್ ಸುವರ್ಣ (ನಿವೃತ ಅಂಚೆ ನೌಕರರು )ಭೋಜರಾಜ್ ಕೋಟ್ಯಾನ್ (ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಮಳವೂರ್ )ಲಕ್ಷಣ ಬಂಗೇರ (ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಮಳವೂರ್ ) ಮುಂತಾದ ಅತಿಥಿ ಗಣ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಉಶಾಕಿರಣ ಸ್ವಾಗತಿಸಿದರು, ಗೀತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಮಾಲಾಶ್ರೀ ಪ್ರಾಸ್ತಾವಿಕ ಮಾತನಾಡಿದರು. ಉಷಾ ಎಂ. ವಂದಿಸಿದರು. ಅರುಣ್ ಶೆಟ್ಟಿ ಕ್ರೀಡಾಕೂಟದ ನಿರೂಪಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: