ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಚಿಂತನೆ: ಶೋಭಾ ಕರಂದ್ಲಾಜೆ

shobha karandlaje
01/10/2022

ಉಡುಪಿ: ರಾಜ್ಯದಲ್ಲಿನ ಎಲ್ಲಾ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ  ಸಿದ್ದವಿದ್ದು , ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.

ಪೆರ್ಡೂರು ನಲ್ಲಿ  355.72 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಎನ್.ಹೆಚ್.169ಎ ಹೆಬ್ರಿ-ಪರ್ಕಳ-ಕರಾವಳಿ ಬೈಪಾಸ್- ಮಲ್ಪೆ ಚತುಷ್ಪತ ರಸ್ತೆ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕರ್ನಾಟಕದಲ್ಲಿನ ಎಲ್ಲಾ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಅರ್ಥಿಕ ನೆರವು ನೀಡಲು ಸಿದ್ದವಿದ್ದು, ರಸ್ತೆ ಕಾಮಗಾರಿ ಕಾರ್ಯಕ್ಕೆ ಭೂ ಸ್ವಾಧೀನ ಪ್ರಕ್ರಿಯೆಲ್ಲಿನ ವಿಳಂಬದಿಂದ ತೊಡಕು ಉಂಟಾಗದಂತೆ ನೋಡಿಕೊಳ್ಳಬೇಕಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಪ್ರಸ್ತುತ ನಿರ್ಮಾಣವಾಗುತ್ತಿರುವ ಎನ್.ಹೆಚ್.169ಎ ಹೆಬ್ರಿ-ಪರ್ಕಳ-ಕರಾವಳಿ ಬೈಪಾಸ್- ಮಲ್ಪೆ ಚತುಷ್ಪತ ರಸ್ತೆ ಕಾಮಗಾರಿಯು 2 ವರ್ಷದಲ್ಲಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದ್ದು, ಈ ಹೆದ್ದಾರಿಯಲ್ಲಿ ಯಾವುದೇ ಟೋಲ್ ಗೇಟ್ ಗಳು ಇರುವುದಿಲ್ಲ ಎಂದ ಕೇಂದ್ರ ಸಚಿವರು ಕರಾವಳಿ ಜಿಲ್ಲೆಗಳನ್ನು ಇತರೆ ಜಿಲ್ಲೆಗಳೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ ಎಂದರು.

ಈ ಚತುಷ್ಪತ ಕಾಮಗಾರಿಯಲ್ಲಿ ಮಲ್ಪೆಯ ರಸ್ತೆ ಅಗಲೀಕರಣದಿಂದ ಜಿಲ್ಲೆಯ ಮೀನುಗಾರಿಕೆ ಮತ್ತು ಪ್ರವಾಸೋದ್ಯಮದ ಅಭಿವೃಧ್ದಿಗೆ ಪೂರಕವಾಗಲಿದ್ದು , ಮಣಿಪಾಲದಲ್ಲಿನ ಆರೋಗ್ಯ ಸೇವೆಯ ದೃಷ್ಠಿಯಿಂದ ಈ ರಸ್ತೆ ಅಭಿವೃಧ್ದಿ ಅತ್ಯಂತ ಅಗತ್ಯವಿದ್ದು, ಈಗಾಗಲೇ ಪರ್ಕಳದಿಂದ ಉಡುಪಿವರೆಗಿನ ರಸ್ತೆ ಕಾಮಗಾರಿ ನಡೆಯುತ್ತಿದೆ.  ಹೆಬ್ರಿಯಿಂದ ಆಗುಂಬೆವರೆಗಿನ ರಸ್ತೆ ಅಭಿವೃಧ್ದಿಗೆ ಸಹ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ,ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್,ವಿವಿಧ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು , ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತಿತರರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version