ಕರಾವಳಿಯ ಮಣ್ಣಿನಲ್ಲಿದೆ ಬುದ್ಧನ ಹೆಜ್ಜೆಗಳು: ಉದಯ್ ಕುಮಾರ್ ತಲ್ಲೂರು - Mahanayaka

ಕರಾವಳಿಯ ಮಣ್ಣಿನಲ್ಲಿದೆ ಬುದ್ಧನ ಹೆಜ್ಜೆಗಳು: ಉದಯ್ ಕುಮಾರ್ ತಲ್ಲೂರು

budhana jeddu
10/01/2023

ಕುಂದಾಪುರ: ಕರಾವಳಿಯ ಮಣ್ಣಿನಲ್ಲಿದೆ ಬುದ್ಧನ ಹೆಜ್ಜೆಗಳು, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಬುದ್ದನಜೆಡ್ದು ಇದೀಗ ಜನಾಕರ್ಷಣೀಯ ಕೇಂದ್ರವಾಗಿ ಪರಿವರ್ತನೆಯಾಗುತ್ತಿದ್ದು, ಬೌದ್ಧ ಬಿಕ್ಕುಗಳು ಇಲ್ಲಿ ಧ್ಯಾನ ಮಾಡಿರುವ ಕುರುಹುಗಳು ಇಲ್ಲಿವೆ.

ಇದೀಗ ಈ ಪ್ರದೇಶದಲ್ಲಿ ಭೀಮಾ ಕೋರೆಗಾಂವ್ 205ನೇ ವಿಜಯೋತ್ಸವವನ್ನು ಆಚರಿಸಲಾಗಿದ್ದು, ಈ ವೇಳೆ ಮಾತನಾಡಿದ ಭೀಮ ಘರ್ಜನೆ ಯ ಸ್ಥಾಪಕಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ಅವರು, ಈ ಸ್ಥಳದ ಕುರಿತಾಗಿ ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡರು.

ಬೌದ್ಧ ಬಿಕ್ಕುಗಳು ಇಲ್ಲಿ ಧ್ಯಾನ ನಡೆಸುತ್ತಿದ್ದ ವನ ಇದಾಗಿದೆ. ಇಲ್ಲಿ ಜಿಂಕೆಗಳು ಕೂಡ ವಾಸವಿದ್ದ ಕುರುಹುಗಳಿವೆ. ಜೊತೆಗೆ ಬುದ್ಧನ ಹೆಜ್ಜೆಗಳಿವೆ. ಈ ಹೆಜ್ಜೆಗಳನ್ನು ಕೆಲವರು ಭೀಮನ ಹೆಜ್ಜೆ ಎಂದು ದಿಕ್ಕು ತಪ್ಪಿಸುತ್ತಿದ್ದಾರೆ.  ಬೌದ್ಧ ಬಿಕ್ಕುಗಳು ಜಿಂಕೆಗಳು ವಾಸ ವಿರುವ ಸ್ಥಳದಲ್ಲಿ ವಾಸ ಮಾಡುತ್ತಾರೆ. ಮಾತ್ರವಲ್ಲದೇ ಈ ಪ್ರದೇಶಕ್ಕೆ ಬುದ್ದುನಜೆಡ್ದು ಅನ್ನೋ ಹೆಸರು ಇದೆ. ಇಲ್ಲಿರೋದು ಬುದ್ಧನ ಹೆಜ್ಜೆಗಳು ಎಂದು ಉದಯ್ ಕುಮಾರ್ ತಲ್ಲೂರು ಮಾಹಿತಿ ನೀಡಿದರು.

ಈ ಭಾಗದಲ್ಲಿ ಇತಿಹಾಸಕಾರರು ಬುದ್ಧನ ಹೆಜ್ಜೆಯನ್ನು ಗುರುತಿಸಿದ್ದಾರೆ.  ಅವರು ಗುರುತಿಸಿರುವ ಎಲ್ಲ ಬುದ್ಧನ ಹೆಜ್ಜೆಗಳನ್ನು ನಾವು ಇಲ್ಲಿ ನೋಡಬಹುದಾಗಿದೆ. ಹಾಗಾಗಿ ಈ ಸ್ಥಳದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕಿದೆ. ಪ್ರತೀ ವರ್ಷವೂ ಇಲ್ಲಿ ಬುದ್ಧ ಪೂರ್ಣಿಮೆ ಮತ್ತು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಎಲ್ಲರ ಒಪ್ಪಿಗೆಯ ಮೇರೆಗೆ ಇಲ್ಲಿ ಭೀಮಾ ಕೋರೆಗಾವ್ ವಿಜಯ ಸ್ಥಂಭ ನೆಡಲಾಗಿದೆ. ಪ್ರತೀ ವರ್ಷ ಈ ಕಾರ್ಯಕ್ರಮ ಜಾತ್ರೆಯಂತೆಯೇ ನಡೆಯಬೇಕು. ನಮ್ಮ ಇತಿಹಾಸವನ್ನು ಕಣ್ಣಾರೆ ನಾವು ಕಂಡಿದ್ದೇವೆ. ಅದಕ್ಕೆ ಇಲ್ಲಿ ಸಾಕ್ಷಿ ಎಂದು ಅವರು ಹೇಳಿದರು.

ಇನ್ನೂ ಕೋರೆಗಾಂವ್ ವಿಜಯೋತ್ಸವದ ಕುರಿತು  ಮಾತನಾಡಿದ ಅವರು, ಇವತ್ತು ವೀರಯೋಧರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಮಹರ್ ಸೈನಿಕರು ಬಾಜಿರಾವ್ ಪೇಶ್ವೆಯು ರೂಪಿಸಿದ್ದ ಅಸ್ಪೃಶ್ಯತೆ ಮತ್ತು ಹಿಂದೂ ಧರ್ಮದ ದೌರ್ಜನ್ಯದ ವಿರುದ್ಧ 500 ಮಹರ್ ಸೈನಿಕರು 25 ಸಾವಿರ ಪೇಶ್ವೆ ಸೈನಿಕರೊಂದಿಗೆ ಹೋರಾಟಗೈದು ಯದ್ಧದಲ್ಲಿ ವಿಜಯ ಗಳಿಸಿದ ದಿನದ ಹಿಂದಿನ ಇತಿಹಾಸವನ್ನು ನಾವು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಾಸಕ ಶಂಬು ಸುವರ್ಣ ಅವರು ಬುದ್ಧ ವಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ದ.ಸಂ.ಸ (ರಿ)ಭೀಮ ಘರ್ಜನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಚಂದ್ರ ಅಳ್ತಾರ್, ಕಾರ್ಕಳ ತಾಲೂಕು ಸಂಚಾಲಕರಾದ ಸುರೇಂದ್ರ ಬಜಗೋಳಿ, ಕುಂದಾಪುರ ತಾಲೂಕು ಸಂಘಟನಾ ಸಂಚಾಕ ಕೆ.ಎಸ್.ವಿಜಯ್, ಬೈಂದೂರು ಸಂಘಟನಾ ಸಂಚಾಲಕ ರಘು ಶಿರೂರು, ಕಾರ್ಕಳ ಭೀಮ ಘರ್ಜನೆಯ ಮಹಿಳಾ ಸಂಘಟನಾ ಸಂಚಾಲಕಿ ದುರ್ಗಿ ನಕ್ರೆ, ಸಾಣೂರು ಗ್ರಾಮ ಶಾಖೆಯ ಮಹಿಳಾ ಸಂಚಾಲಕಿ ವೀಣಾ ಪರ್ಪಲೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ