ಕರಾವಳಿಯಲ್ಲಿ ಭಾರೀ ಮಳೆ: ವಿಮಾನ ನಿಲ್ದಾಣ ರಸ್ತೆಯ ಸೇತುವೆ ಕುಸಿತ - Mahanayaka
6:13 AM Saturday 21 - September 2024

ಕರಾವಳಿಯಲ್ಲಿ ಭಾರೀ ಮಳೆ: ವಿಮಾನ ನಿಲ್ದಾಣ ರಸ್ತೆಯ ಸೇತುವೆ ಕುಸಿತ

mangalore setuve
15/06/2021

ಮಂಗಳೂರು:  ಕರಾವಳಿಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಮಳೆಯ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಗರದ ರಸ್ತೆ ಸಾರಿಗೆಯ ಪ್ರಮುಖ ರಸ್ತೆ ಮರವೂರು ಸೇತುವೆ ಮಂಗಳವಾರ ಮುಂಜಾನೆ ಬಿರುಕು ಬಿಟ್ಟಿದೆ.

ಮುಂಜಾನೆ 3 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬಿರುಕು ತೀವ್ರ ಆಳವಾಗಿದ್ದು, ಸೇತುವೆ ಕುಸಿತ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  ಸೇತುವೆಯ ಕೆಳಗೆ ನಡೆಯುತ್ತಿರುವ ಮರಳುಗಾರಿಕೆ ಬಿರುಕಿಗೆ ಕಾರಣವಾಗುತ್ತಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

ಬಜ್ಪೆಯಿಂದ ಮಂಗಳೂರು ಕಡೆಗೆ ಬರುವಾಗ ಸೇತುವೆಯ ಮೊದಲ ಅಂಕಣ ಸುಮಾರು 3 ಅಡಿಗಳಷ್ಟು ಕೆಳಗೆ ಕುಸಿದು ನಿಂತಿದೆ ಎಂದು ತಿಳಿದು ಬಂದಿದೆ. ಮಂಗಳೂರು-ಬಜ್ಪೆ, ಕಟೀಲು ಸಂಪರ್ಕ ರಸ್ತೆ ಇದಾಗಿದ್ದು, ಹೀಗಾಗಿ ಈ ಭಾಗದ ಜನರಿಗೆ ಸಂಪರ್ಕಕ್ಕೆ ಪರ್ಯಾಯ ರಸ್ತೆಗಳ ಬಳಕೆ ಮಾಡಲು ಹೇಳಲಾಗಿದೆ.


Provided by

ಕಾವೂರು-ಕೂಳೂರು-ಕೆಬಿಎಸ್ ಜೋಕಟ್ಟೆ-ಪೋರ್ಕೊಡಿ-ಬಜ್ಪೆ ಮಾರ್ಗ ಅಥವಾ ಪಚ್ಚನಾಡಿ-ವಾಮಂಜೂರು-ಗುರುಪುರ-ಕೈಕಂಬ-ಬಜ್ಪೆ ಮಾರ್ಗವನ್ನು ಬಳಸಬಹುದಾಗಿದೆ.

ಇತ್ತೀಚಿನ ಸುದ್ದಿ