SSLC—PUCಯಲ್ಲಿ ಶೇ.65ಕ್ಕಿಂತ ಅಧಿಕ ಅಂಕಗಳಿಸಿದವರಿಗೆ ಅಭಿನಂದನಾ ಕಾರ್ಯಕ್ರಮ
ಕಾರ್ಕಳ: ತಾಲೂಕಿನ ನಲ್ಲೂರು ಗ್ರಾಮದ ಪರಪ್ಪಾಡಿ ಅಂಬೇಡ್ಕರ್ ಭವನದಲ್ಲಿ ಮಾತೃಶ್ರೀ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ನಲ್ಲೂರು ಇವರ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ.65 ಕ್ಕಿಂತ ಅಧಿಕ ಅಂಕಗಳಿಸಿದವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದ್ದು, ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮತಿ ವಹಿಸಿದ್ದರು.
ಈ ಸಂದರ್ಭದಲ್ಲಿ ಯುವ ಚೇತನ ಯುವಕ ಸಂಘ ಪರಪ್ಪಾಡಿ ಇದರ ಕಾರ್ಯದರ್ಶಿ ಶಶಿಕಾಂತ್, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್, ಒಕ್ಕೂಟದ ಅಧ್ಯಕ್ಷೆ ಸುಮತಿ, ಮಹಾಲಕ್ಷ್ಮಿ ಭಜನಾ ಮಂಡಳಿಯ ಸದಸ್ಯೆ ಹೇಮಲತಾ, ಸ್ಥಳೀಯರಾದ ರಾಘವೇಂದ್ರ ಶೆಟ್ಟಿ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶರ್ಮಿಳಾ, ಮುಖ್ಯ ಪುಸ್ತಕ ಬರಹಗಾರರಾದ ಅಶ್ವಿನಿ, ಕೋಶಾಧಿಕಾರಿ ಗುಲಾಬಿ, ಎಂಬಿಕೆ ಎಲ್ ಸಿ ಆರ್ ಪಿ, ಬಿಸಿ ಸಖಿ, LCRPಗಳಾದ ಸುನೀತಾ, ಸಂಗೀತ, ಜಯಂತಿ ಸಂಘದ ಸದಸ್ಯೆಯರು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka