ಫೆ.23ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣ - Mahanayaka
2:38 PM Wednesday 4 - December 2024

 ಫೆ.23ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣ

20/02/2021

ಜೇವರ್ಗ:  ನೂತನ ಯಡ್ರಾಮಿ ತಾಲ್ಲೂಕಿನ ಕರಕಿಹಳ್ಳಿ ಗ್ರಾಮದಲ್ಲಿ ಇದೇ 23 ರಂದು ಸಾಯಂಕಾಲ 4 ಗಂಟೆಗೆ ವಿಶ್ವರತ್ನ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಜರುಗಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಯುವ ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಭರ್ಮಾ ತಿಳಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ರಾಜಕೀಯ ರಹಿತವಾಗಿ ಮಾಡಲು ನಿರ್ಧರಿಸಲಾಗಿದೆ. ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಉದೇಶದಿಂದ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.

ಈ ಕಾರ್ಯಕ್ರಮಕ್ಕೆ ಹತ್ಯಾಳದ ಭಂತೆ ದಮ್ಮನಾಗ ಅವರು ಕಾರ್ಯಕ್ರಮದ ದಿವ್ಯಸಾನಿದ್ಯ ಹಾಗೂ ಡಾ. ಬಾಬಾ ಸಾಹೇಬರ ಮೂರ್ತಿ ಅನಾವರಣ ಮಾಡಲಿದ್ದಾರೆ. ಮೈಸೂರಿನ ಉರಿಲಿಂಗ ಪೆದ್ದಿಮಠದ ಡಾ. ಜ್ಞಾನಪ್ರಕಾಶ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಭಾಷಣಕಾರರಾಗಿ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಡಾ. ಅಪ್ಪುಗೆರ ಸೋಮಶೇಖರ, ಸೊನ್ನ ಎಸ್.ಜಿ.ಎಸ್.ವಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಉಪನ್ಯಾಸ ನೀಡುವರು. ಜಿ.ಪಂ ಸದಸ್ಯರಾದ ಶಾಂತಪ್ಪ ಕೂಡಲಗಿ, ಕಮಲಾಬಾಯಿ ಮರೆಪ್ಪ ಬಡಿಗೇರ ಅವರು ನೀಲಿ ಧ್ವಜಾರೋಹಣ ಮಾಡುವರು.

ಗೊಲ್ಲಾಳಪ್ಪ ಕಡಿ, ಶಾಂತಪ್ಪ ಯಲಗೋಡ ಅವರು ಪಂಚಶೀಲ ಧ್ವಜಾರೋಹಣವನ್ನು ಮಾಡುವರು. ಗುರಣ್ಣ ಕಾಚಾಪುರ ಅವರು ಬುದ್ಧ, ಬಸವ, ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು. ಜಿ.ಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ ಅಧ್ಯಕ್ಷತೆ ವಹಿಸುವರು.

ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಅವರಿಂದ ಕ್ರಾಂತಿಗೀತೆ ನಡೆಯಲಿದ್ದು, ಇದೇ ವೇಳೆ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಹಾಗೂ ಡಾಕ್ಟರೇಟ್ ಪದವಿದರರಿಗೆ ವಿಶೇಷ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶರಣಪ್ಪ ನಡುವಿನಮನಿ, ಸಿದ್ದಣ್ಣ ದುಮ್ಮದ್ರಿ, ಡಾ.ಪ್ರಕಾಶ ಬಡಿಗೇರ, ಡಾ. ಅಶೋಕ ದೊಡ್ಮನಿ, ಮಂಜುನಾಥ ಗಂಗಾಕರ, ಬಸವರಾಜ ಕಲಕೇರಿ ಇದ್ದರು.

ಇತ್ತೀಚಿನ ಸುದ್ದಿ